
ಕ್ರೀಡೆ
ಪಂದ್ಯವೊಂದರಲ್ಲೇ 11 ಕ್ಯಾಚ್ ಪಡೆದು ವಿಶ್ವ ದಾಖಲೆ ಸರಿಗಟ್ಟಿದ ಪಂತ್
ಅಡಿಲೇಡ್,ಡಿ.10-ಟೀಂ ಇಂಡಿಯಾದ ಉದಯೋನ್ಮುಖ ವಿಕೆಟ್ ಕೀಪರ್ ರಿಷಭ್ ಪಂತ್ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.
ಮೊದಲ ಇನ್ನಿಂಗ್ಸ್ ನಲ್ಲಿ 6 ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ 5 ಕ್ಯಾಚ್ ಸೇರಿದಂತೆ ಪಂದ್ಯವೊಂದರಲ್ಲೇ ಒಟ್ಟು 11 ಕ್ಯಾಚ್ ಪಡೆದ ಪಂತ್ ಈ ಸಾಧನೆ ಮಾಡಿದ ಭಾರತದ ಮೊದಲ ವಿಕೆಟ್ ಕೀಪರ್ ಎನ್ನಿಸಿಕೊಂಡಿದ್ದಾರೆ. ಅಲ್ಲದೆ, ಜಾಕ್ ರಸ್ಸಲ್ ಹಾಗೂ ಎಬಿ ಡಿವಿಲಿಯರ್ಸ್ ಪಂದ್ಯವೊಂದರಲ್ಲಿ ಒಟ್ಟು 11 ಕ್ಯಾಚ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ್ದರು. ಪಂತ್ ಕೂಡ 11 ಕ್ಯಾಚ್ ಪಡೆದು ಈ ಇಬ್ಬರ ಸಾಲಿಗೆ ಸೇರಿದ್ದಾರೆ.
ಇದರ ಜತೆಗೆ ಭಾರತದ ವೃದ್ಧಿಮಾನ್ ಸಹಾ(2018,ಕೇಪ್ಟೌನ್, ದ.ಆಫ್ರಿಕ ವಿರುದ್ಧ್ದ) ಹಾಗೂ ಎಂಎಸ್ ಧೋನಿ(2014, ಎಂಸಿಜಿ, ಆಸ್ಟ್ರೇಲಿಯ ವಿರುದ್ಧ)ಪಂದ್ಯವೊಂದರಲ್ಲಿ ಕ್ರಮವಾಗಿ 10 ಹಾಗೂ 9 ಕ್ಯಾಚ್ ಪಡೆದಿದ್ದಾರೆ. ಪಂತ್ ಈ ಇಬ್ಬರ ಸಾಧನೆಯನ್ನು ಮೀರಿಸಿದ್ದಾರೆ.
ರಸ್ಸಲ್ 1995ರಲ್ಲಿ ಜೋಹಾನ್ಸ್ಬರ್ಗ್ನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಈ ಸಾಧನೆ ಮಾಡಿದ್ದರೆ, ಡಿವಿಲಿಯರ್ಸ್ 2013ರಲ್ಲಿ ಪಾಕ್ ವಿರುದ್ದ ಜೋಹಾನ್ಸ್ಬರ್ಗ್ನಲ್ಲಿ ಒಟ್ಟು 11 ಕ್ಯಾಚ್ಗಳನ್ನು ಪಡೆದ ಸಾಧನೆ ಮಾಡಿದ್ದರು. (ಎಂ.ಎನ್)