ಮೈಸೂರು

ಪೋಲಿಸರಿಂದ ದೌರ್ಜನ್ಯ : ಠಾಣೆಯ ಮುಂದೆ ಧರಣಿ

ನಂಜನಗೂಡು ತಾಲೂಕಿನ ದೇವರಸನಹಳ್ಳಿ ಗ್ರಾಮದ ದಲಿತರ ಮೇಲೆ ಪೋಲಿಸರು ದೌರ್ಜನ್ಯ ಮಾಡುತ್ತಿದ್ದಾರೆ ಹಾಗೂ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ನಡೆದ ಹೊಸೂರು ಗ್ರಾಮದ ಗಲಾಟೆ ಸಂಬಂಧ ಇಲ್ಲದಿರುವ ಪ್ರಕರಣಗಳ ಆರೋಪಗಳನ್ನು ಮಾಡಿ ಅಲ್ಲಿನ ದಲಿತ ಯುವಕರನ್ನು ಬಂದಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಠಾಣೆಯ ಮುಂದೆ ಧರಣಿ ನಡೆಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಡಿ.ಎಸ್.ಎಸ್ ನಾರಾಯಣ್, ಹೊಸೂರು ಗ್ರಾಮದ ಗಲಾಟೆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುವ ಸಲುವಾಗಿ ಪೋಲಿಸರು ವಿನಾಕಾರಣ ಗ್ರಾಮದ ದಲಿತರ ಮನೆಗಳಿಗೆ ನುಗ್ಗಿ ದಾಂದಲೆ ನಡೆಸಿದ್ದಾರೆ. ಮಾತ್ರವಲ್ಲದೇ, ಹೆಂಗಸರ ಮೇಲೆ ಹಲ್ಲೆಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿ ನಿಂದನೆ ಮಾಡಿದ್ದಾರೆ. ಕುರಿತು ತನಿಖೆ ಕೈಗೊಂಡು ಜಾತಿ ನಿಂದನೆ ಮಾಡಿದ ಪೋಲಿಸರನ್ನು ಅಮಾನತುಗೊಳಿಸಿ ಅವರಿಗೆ ಶಿಕ್ಷೆ ನೀಡುವಂತೆ ಒತ್ತಾಯಿಸಿದರು.

ಇದೇವೇಳೆ ಗ್ರಾಮಸ್ಥರ ಮನವಿ ಸ್ವಿಕರಿಸಿದ ನಂಜನಗೂಡು ಉಪವಿಭಾಗದ ಸಹಾಯಕ ಪೊಲೀಸ್ ಅಧಿಕಾರಿ ಮೊಹಮದ್ ಸುಜಿತ್ ಮನವಿಯನ್ನು ಪರಿಶೀಲಿಸಿ ಒಂದೆರಡು ದಿನಗಳಲ್ಲಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವ ಹಾಗೂ ಎರಡು ಗ್ರಾಮಗಳ ನಡುವಿನ ವೈಮನಸ್ಸನ್ನು ಹೋಗಲಾಡಿಸಲು ಶಾಂತಿ ಸಭೆಯನ್ನು ನಡೆಸುವ ಭರವಸೆಯನ್ನು ನೀಡಿದರಲ್ಲದೇ ಗ್ರಾಮಸ್ಥರು ಧರಣಿಯನ್ನು ಹಿಂಪಡೆಯುವಂತೆ ಮಾಡಿದರು.

Leave a Reply

comments

Related Articles

error: