ಮೈಸೂರು

ಮೈಮೇಲೆ ಚೆಲ್ಲಿದ ಸಾಂಬಾರು : ಜೀವನ್ಮರಣದ ನಡುವೆ ಹೋರಾಟ

ಮೈಸೂರಿನ ಚಾಮುಂಡಿ ಬೆಟ್ಟದ ದಾಸೋಹ ಭವನದಲ್ಲಿ ಅಡುಗೆ ರೂಮಿನಿಂದ ಸಾಂಬಾರನ್ನು, ಮೇಲ್ಗಡೆ ಇರುವ ಹಾಲ್ ಗೇ ಕೊಂಡೊಯ್ಯುವಾಗ ವ್ಯಕ್ತಿಯೋರ್ವರ ಕಾಲು ಜಾರಿದ ಪರಿಣಾಮ ಬಿಸಿ ಸಾಂಬಾರ್ ಮೈಮೇಲೆ ಚೆಲ್ಲಿ ವ್ಯಕ್ತಿಗಳಿಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ಸಾಂಬಾರು ಚೆಲ್ಲಿ ಗಾಯಗೊಂಡವರನ್ನು ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯ ಕಾರ್ಯಾ ನಿವಾಸಿ ನಂದೀಶ್(26) , ಹಾಗೂ ಚಾಮುಂಡಿ ಬೆಟ್ಟದ ನಿವಾಸಿ ಚೆಲುವರಾಜು(46)ಎಂದು ಗುರುತಿಸಲಾಗಿದೆ.

ಸಾಂಬಾರನ್ನು ಲಿಫ್ಟ್ ನಲ್ಲಿ ಕೊಂಡೊಯ್ಯಲಾಗುತ್ತಿತ್ತು. ಆದರೆ ಕೆಲ ದಿನಗಳಿಂದ ಲಿಫ್ಟ್ ಕೆಟ್ಟು ನಿಂತ ಪರಿಣಾಮ ಮೆಟ್ಟಿಲು ಮೂಲಕವೇ ಸಾಂಬಾರನ್ನು ಒಯ್ಯುತ್ತಿದ್ದರು. ನಂದೀಶ್ ಮತ್ತು ಚೆಲುವರಾಜು ಮೆಟ್ಟಿಲು ಮೂಲಕ ಸಾಂಬಾರನ್ನು ಕೊಂಡೊಯ್ಯುವಾಗ ನಂದೀಶ್ ಅವರ ಕಾಲು ಜಾರಿದ ಪರಿಣಾಮ ಸಾಂಬಾರು ಮೈಮೇಲೆಲ್ಲ ಚೆಲ್ಲಿದೆ. ಇದರಿಂದ ನಂದೀಶ್ ಅವರ ಶರೀರ ಶೇ.70ರಷ್ಟು ಸುಟ್ಟಿದ್ದು, ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದಾರೆ. ಚೆಲುವರಾಜು ಅವರಿಗೆ ಶೇ.50ರಷ್ಟು ಸುಟ್ಟ ಗಾಯಗಳಾಗಿವೆ.

ಗಾಯಗೊಂಡವರನ್ನು ಚಿಕಿತ್ಸೆಗಾಗಿ ಕೆ.ಆರ್.ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆ.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: