ಮೈಸೂರು

ದಿ ರೈಲ್ವೆ ಕೋ ಅಪರೇಟಿವ್ ಬ್ಯಾಂಕ್ ಗೆ ಪ್ರಶಸ್ತಿ

ಮೈಸೂರು,ಡಿ.10 : ದಿ ರೈಲ್ವೆ ಕೋ ಅಪರೇಟಿವ್ ಬ್ಯಾಂಕ್ ಪ್ರಸಕ್ತ ಸಾಲಿನ ಒಟ್ಟು ವಹಿವಾಟುವಿನಲ್ಲಿ ಅತ್ಯುತ್ತಮ ಸಾಧನೆ ಸಾಧಿಸುವ ಮೂಲಕ ಪ್ರಥಮ ಸ್ಥಾನ ಗಳಿಸಿದೆ.

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ನೀಡಲ್ಪಡುವ ಪ್ರಶಸ್ತಿಯನ್ನು ಬ್ಯಾಂಕ್ ಪಡೆದಿದ್ದು, ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಬಿ.ಮಂಚೇಗೌಡ  ಉಪಾಧ್ಯಕ್ಷ ಡಾ.ಕೆ.ವಿಜಯಕುಮಾರ್ ಪ್ರಶಸ್ತಿ ಸ್ವೀಕರಿಸಿದ್ದಾರೆ

ನಿರ್ದೇಶಕರಾದ ಎಂ.ಯತಿರಾಜು, ಬಿ.ಆರ್.ಶ್ರೀಧರ್, ಸಿ.ರಾಮನಾದನ್, ಪಿ.ಎಸ್.ಕೃಷ್ಣ, ಎಸ್.ಅಶೋಕ್ ಕುಮಾರ್, ಎಂ.ಆರ್.ಚಂದ್ರಶೇಖರ್, ಎಂ.ಶ್ರೀನಿವಾಸಮೂರ್ತಿ, ಸಿ.ಶಿವಶಂಕರ್, ಎಸ್.ಆನಂದ್, ಟಿ.ದೂಕೇಶಪ್ಪ, ಎಸ್.ಗಿರೀಶ್ ಕುಮಾರ್, ಎಸ್.ಶ್ವೇತಾ, ಕೆ.ಅಕ್ಕಮಹಾದೇವಿ ಮತ್ತು ಬ್ಯಾಂಕಿನ ಸಹಾಯಕ ಜನರಲ್ ಮ್ಯಾನೇಜರ್ ಹೆಚ್.ಸಿ.ಸತ್ಯನಾರಾಯಣ ಅವರುಗಳು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಾಜರಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: