ಮೈಸೂರು

ಒಂದೇ ಗಂಟೆಯಲ್ಲಿ ನಾಟಕ ಕಲಿತು ನಾಟಕ ಪ್ರದರ್ಶಿಸಿ ಭೇಷ್ ಎನಿಸಿಕೊಂಡ ಡಿವೈಎಸ್ಪಿಗಳು

ಮೈಸೂರು,ಡಿ.10:- ಸಮಾಜದಲ್ಲಿ ಶಾಂತಿ ಕಾಪಾಡೋಕು ಸೈ , ಸಾಮಾಜಿಕ ಅರಿವು ಮೂಡಿಸೋಕು ಸೈ ಎಂದರು ಪೊಲೀಸ್ ಅಧಿಕಾರಿಗಳು, ಒಂದೇ ಗಂಟೆಯಲ್ಲಿ ನಾಟಕ ಕಲಿತ ಡಿವೈಎಸ್ ಪಿ ಗಳು ಇವೆಲ್ಲ ಕಂಡು ಬಂದಿದ್ದು ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ.

ಮಾನವ ಹಕ್ಕುಗಳ ದಿನಾಚರಣೆಗಾಗಿಯೇ ಡಿವೈಎಸ್ಪಿಗಳಿಂದು ನಾಟಕ ಪ್ರದರ್ಶನಕ್ಕೆ ಸಿದ್ಧರಾಗಿ ಬಂದಿದ್ದು,  ಆಡಳಿತ ತರಬೇತಿ ಸಂಸ್ಥೆಯಲ್ಲಿ ಪ್ರೊಬೇಷನರಿ ಡಿವೈಎಸ್ಪಿಗಳು ಕೇವಲ ಒಂದೇ ಗಂಟೆಯಲ್ಲಿ ನಾಟಕ ಕಲಿತು ಪ್ರದರ್ಶಿಸಿದರು. ಮಾನವ ಹಕ್ಕುಗಳ ಸಂದೇಶ ಸಾರುವ ನಾಟಕಗಳನ್ನು  ಪ್ರದರ್ಶಿಸುವ ಮೂಲಕ  ಖಾಕಿ ಬಿಟ್ಟು ಕಲಾವಿದರಾದರಾದರು.  ಮಾನವನ ಹಕ್ಕುಗಳ ಬಗ್ಗೆ ಜಾಗೃತಿ, ಪ್ರಾಣಿಗಳ ಹಕ್ಕುಗಳ ಸಂದೇಶ ಸಾರುವ ಮೂರು ಕಿರು ನಾಟಕಗಳನ್ನು ಪ್ರದರ್ಶಿಸಿದರು. ನಾಟಕ ವೀಕ್ಷಿಸಲು ಆಗಮಿಸಿದ ರಾಜ್ಯ ನಿವೃತ್ತಿ ಡಿಜಿ ಐಜಿಪಿ ರೂಪಕ್ ಕುಮಾರ್ ದತ್ತ ಅವರು ಪ್ರೊಬೇಷನರಿ ಡಿವೈಎಸ್ಪಿಗಳ ನಾಟಕಕ್ಕೆ ಫಿದಾ ಆದರಲ್ಲದೇ  ಪೊಲೀಸ್ ಅಧಿಕಾರಿಗಳ ನಾಟಕ ಪ್ರದರ್ಶನಕ್ಕೆ ಬೇಷ್ ಎಂದರು. ಆಡಳಿತ ತರಬೇತಿ ಸಂಸ್ಥೆಯ 154,155 ನೇ ಬ್ಯಾಚ್ ನ ಪ್ರೊಬೇಷನರಿ ಡಿವೈಎಸ್ಪಿ ಅಧಿಕಾರಿಗಳು ನಾಟಕ ಪ್ರದರ್ಶಿಸಿದರು.

ರೂಪಕ್ ಕುಮಾರ್ ದತ್ತ ಅವರು ಮಾನವ ಹಕ್ಕುಗಳ ರಕ್ಷಣೆ ಬಗ್ಗೆ ಕಾರ್ಯಗಾರ ನಡೆಸಿಕೊಟ್ಟರು. ಈ ಸಂದರ್ಭ ಮಾತನಾಡಿದ ಅವರು ಮಾನವ ಹಕ್ಕುಗಳು ವ್ಯಕ್ತಿ ಹುಟ್ಟಿನಿಂದಲೇ ಸ್ವಾಭಾವಿಕವಾಗಿ ಬರುತ್ತವೆ. ಮಾನವ ಹಕ್ಕುಗಳ ಜೊತೆ ಜೊತೆಯಲ್ಲೇ ಪ್ರಾಣಿಗಳ ಹಕ್ಕುಗಳ ಬಗ್ಗೆಯೂ ಮಾತನಾಡಬೇಕಿದೆ. ಆಧುನಿಕ ವ್ಯವಸ್ಥೆಯಲ್ಲಿ ಮಾನವ ಹಕ್ಕುಗಳ ರಕ್ಷಣೆ ಅತ್ಯಗತ್ಯ ಎಂದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: