ಮೈಸೂರು

ಕಾಂಗ್ರೆಸ್ ಸದಸ್ಯರ ಅನುಪಸ್ಥಿತಿ: ಜಿ.ಪಂ. ಸ್ಥಾಯಿ ಸಮಿತಿ ಚುನಾವಣೆ ಮುಂದಕ್ಕೆ

ಕಾಂಗ್ರೆಸ್ ಸದಸ್ಯರ ಅನುಪಸ್ಥಿತಿಯಿಂದಾಗಿ ಜಿಲ್ಲಾಪಂಚಾಯತ್ ನ ಸ್ಥಾಯಿ ಸಮಿತಿಗಳ ಚುನಾವಣೆ ಎರಡನೇ ಬಾರಿ ಮುಂದೂಡಲ್ಪಟ್ಟಿದೆ.

ಗುರುವಾರ ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಸಭೆಯನ್ನು ಕರೆಯಲಾಗಿತ್ತು. ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು 12 ಗಂಟೆಗೆ ಹಾಜರಿದ್ದರು. ಆದರೆ ಕಾಂಗ್ರೆಸ್ ಸದಸ್ಯರುಗಳ ಗೈರು ಹಾಜರಿಯೇ ಎದ್ದು ಕಾಣುತ್ತಿತ್ತು.

ಜಿಪಂ ಸಿಇಓ ಪಿ. ಶಿವಶಂಕರ್ ಮಾತನಾಡಿ ಕೇವಲ 30 ಮಂದಿ ಸದಸ್ಯರಿರುವುದರಿಂದ ಸಭೆ ಮುಂದೂಡಲಾಗಿದೆ. 74 ಸದಸ್ಯರಾದರೂ ಹಾಜರಿರಲೇಬೇಕು ಎಂದರು. ಕಳೆದ ಜುಲೈ 5 ಕ್ಕೆ ಸಭೆ ಕರೆಯಲಾಗಿತ್ತು. ಆಗಲೂ ಸಭೆ ಯಶಸ್ವಿಯಾಗದೆ ಮುಂದೂಡಲ್ಪಟ್ಟಿತ್ತು. ಈ ಬಾರಿಯೂ ಅದೇ ಪುರಾವರ್ತನೆ ಆಗಿದೆ. ಮುಂದೆಯೂ ಇದೇ ರೀತಿ ಪುನರಾವರ್ತನೆಯಾದಲ್ಲಿ ಜಿಪಂ ಸದಸ್ಯತ್ವ ಕಳೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ ಚುನಾವಣೆ ಇದೇ ರೀತಿ ಮುಂದೂಡಲ್ಪಡುತ್ತಿದ್ದರೆ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತವೆ. ಕಾಂಗ್ರೆಸ್ ಸದಸ್ಯರು ಇದನ್ನು ಅರ್ಥ ಮಾಡಿಕೊಂಡು ಜನರ ಕ್ಷೇಮಾಭಿವೃದ್ಧಿಗೆ ಕ್ಷಮಿಸಬೇಕು ಎಂದರು.

ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ ಸೆಪ್ಟೆಂಬರ್ 1ರಂದು ಸಭೆ ಕರೆದಿದ್ದಾರೆ. ಜಿಪಂ ಉಪಾಧ್ಯಕ್ಷ ಜಿ.ನಟರಾಜ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಆರ್. ಮಹೇಶ್, ಚಿಕ್ಕಮಾದು ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: