ಪ್ರಮುಖ ಸುದ್ದಿಮೈಸೂರು

ತಮಿಳುನಾಡಿಗೆ ಹರಿಯುತ್ತಿದೆ ಕಬಿನಿ ನೀರು: ಅಧಿಕಾರಿಗಳ ನಾಟಕದ ವಿರುದ್ಧ ಸ್ಥಳೀಯ ರೈತರಿಂದ ದೂರು ದಾಖಲು

ಡ್ಯಾಂನಲ್ಲಿ ನೀರು ಉಳಿಸುತ್ತಿಲ್ಲ ಎಂದು ರೈತರು ಪ್ರತಿ ದಿನ ಸರ್ಕಾರಕ್ಕೆ ಶಾಪ ಹಾಕ್ತಿದ್ದಾರೆ. ಆದರೆ, ರೈತರಿಗೆನ್ ಗೊತ್ತು.? ಇದು ಸರ್ಕಾರದ ಕೆಲಸ ಅಲ್ಲ. ಸರ್ಕಾರದೊಳಗೆ ಇರುವ ಅಧಿಕಾರಿಗಳ ಆಟ ಅಂತ. ಹೀಗೆ ಅಧಿಕಾರಿಗಳು ಆಡುತ್ತಿರುವ ಕಣ್ಣಾಮುಚ್ಚಾಲೆ ಆಟಕ್ಕೆ ನಿತ್ಯವೂ 100 ಕ್ಯೂಸೆಕ್ಸ್ ನೀರು ಪೋಲಾಗುತ್ತಿದೆ. ಹಾಗಿದ್ರೆ ಆ ನೀರು ಎಲ್ಲಿಗೆ ಹೋಗುತ್ತಿದೆ..? ಅಷ್ಟಕ್ಕೂ ಆ ಡ್ಯಾಂ ಯಾವುದು..? ಗೊತ್ತಾ.? ಆ ಡ್ಯಾಂ ಸಿಎಂ ತವರು ಜಿಲ್ಲೆಯ ಮೈಸೂರಿನ ಕಬಿನಿ ಜಲಾಶಯ.

ಹೌದು, ಅಧಿಕಾರಿಗಳ ಬೇಜವಬ್ದಾರಿತನವೋ.? ಅಥವಾ ಕಣ್ಣಾಮುಚ್ಚಾಲೆ‌ ಆಟವೋ ಗೊತ್ತಿಲ್ಲ.? ಆದರೆ ನಿತ್ಯವೂ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆಯ ಕಬಿನಿ ಡ್ಯಾಂನ ಎಡದಂಡೆ ಮೂಲಕ ತಮಿಳುನಾಡಿಗೆ 100 ಕ್ಯೂಸೆಕ್ಸ್ ನೀರು ಹರಿದು ಹೋಗುತ್ತಿದೆ. ಆದರೆ ಇದು ಅಧಿಕಾರಿಗಳ ಗಮನಕ್ಕೆ ಬಂದಿಲ್ಲವಂತೆ. ಏಕೆಂದರೆ ಡ್ಯಾಂನಿಂದ ನೀರು ಬಿಡುತ್ತಿರುವ ಮಹಾನುಭಾವರು ಇವರೇ ಅಲ್ಲವೇ..!

img-20170106-wa0037

 

ಒಂದೂವರೆ ತಿಂಗಳಿಂದ ಹರಿಯುತ್ತಿದೆಯಂತೆ ಡ್ಯಾಂನ ನೀರು?

ಸತತ ಒಂದೂವರೆ ತಿಂಗಳಿಂದಲೂ ಹೀಗೆ ನೀರು ಹರಿಯುತ್ತಲೇ ಇದೆ ಎಂಬ ಮಾಹಿತಿ ರೈತರಿಂದ ಲಭ್ಯವಾಗಿದೆ. ಇದರಿಂದ ಕೋಪಗೊಂಡ ರೈತರು ಕೂಡ ನೀರಾವರಿ ಇಲಾಖೆ ಅಧಿಕಾರಿಗಳ ಮೇಲೆ ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ. ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಪ್ರಕರಣವನ್ನೇ ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಜನರ ಆರೋಪ.

ಪೊಲೀಸ್ ಠಾಣೆ ಇರೋದೆ ನೀರಾವರಿ ಇಲಾಖೆ‌ ಕಟ್ಟಡದಲ್ಲಿ…!!

ವಿಪರ್ಯಾಸವೆಂದರೆ ಬೀಚನಹಳ್ಳಿ ಪೊಲೀಸ್ ಠಾಣೆಗೆ ಸ್ವಂತ ಕಟ್ಟಡವೇ ಇಲ್ಲ. ಈ ಕಾರಣದಿಂದ ಪೊಲೀಸ್ ಠಾಣೆ ನೀರಾವರಿ ಇಲಾಖೆಯ ಕಟ್ಟಡವನ್ನ ಆಶ್ರಯಿಸಿದೆ. ಇದರಿಂದ ಕಬಿನಿ ಡ್ಯಾಂ ಅಧಿಕಾರಿಗಳ ವಿರುದ್ಧವಾದ ಪ್ರಕರಣಗಳನ್ನ ಕೈಗೆತ್ತಿಕೊಂಡರೆ ಠಾಣೆಗೆ ತೊಂದರೆಯಾಗಲಿದೆ‌ ಎಂಬ ಭಾವನೆಯಿದೆ ಎಂಬುದು ಸ್ಥಳೀಯರ ಅಭಿಪ್ರಾಯ.

ಮೇಲಿನ ಅಧಿಕಾರಿಗಳು ಕ್ರಮ ಕೈಗೊಳ್ತಾರಾ..?

ರೈತರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಅಧಿಕಾರಿಗಳ ಕಣ್ಣಾಮುಚ್ಚಾಲೆ ಇದೀಗ ಬಯಲಿಗೆ ಬಂದಿದೆ. ಪೊಲೀಸರು ಈ ಬಗ್ಗೆ ಅದ್ಯಾವಾ ರೀತಿಯ ಕ್ರಮ ಕೈಗೊಳ್ಳುತ್ತಾರೆ ನೋಡಬೇಕಿದೆ. ಜೊತೆಯಲ್ಲಿ ಕಬಿನಿ ಜಲಾಶಯದ ಬಗ್ಗೆ ಅಧಿಕಾರಿಗಳು ಏಕೆ ಇಷ್ಟೊಂದು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ರೈತರ ಮಾತುಗಳಿಗೆ ಉತ್ತರ ಕೊಡಬೇಕಿದೆ.

ನೀರಾವರಿ ಅಧಿಕಾರಿಗಳ ಕಣ್ಣಾಮುಚ್ಚಾಲೆ ಆಟಕ್ಕೆ ಬ್ರೇಕ್ ಬೀಳದಿದ್ರೆ ಮುಂದಿನ ದಿನಗಳಲ್ಲಿ ಎಲ್ಲರೂ ನೀರಿಗಾಗಿ ಹಾಹಾಕಾರಪಡೋದಂತೂ ಸುಳ್ಳಲ್ಲ ಅಂತಾರೆ ಸ್ಥಳೀಯ ಜನತೆ.

ಸಿಟಿಟುಡೆ ಎಕ್ಸ್’ಕ್ಲೂಸಿವ್ ವರದಿ: ಸುರೇಶ್ ಎನ್

img-20170106-wa0041

 

 

Leave a Reply

comments

Related Articles

error: