ಸುದ್ದಿ ಸಂಕ್ಷಿಪ್ತ

ನಾಳೆ ವಿದ್ಯುತ್ ವ್ಯತ್ಯಯ

ಮೈಸೂರು. ಡಿ.11:-  ಕ.ವಿ.ಪ್ರ.ನಿ.ನಿ. ವತಿಯಿಂದ 3ನೇ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿಯನ್ನು 66/11 KV ಸೌತ್ (ದಕ್ಷಿಣ) ಮತ್ತು ಜ್ಯೋತಿನಗರ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿದ್ದು, 12ರ ಬುಧವಾರ ಬೆಳಿಗ್ಗೆ 10 ರಿಂದ ಸಂಜೆ 5 ಘಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ನಂಜುಮಳಿಗೆ ವೃತ್ತ, ಲಕ್ಷ್ಮೀಪುರಂ, ವಿದ್ಯಾರಣ್ಯಪುರಂ, ನಾರಾಯಣ ಶಾಸ್ತ್ರಿ ರಸ್ತೆ, ಕಾಕರವಾಡಿ, ನಾಲಾ ಬೀದಿ, ಹೊಸಕೇರಿ, ಅಗ್ರಹಾರ, ತ್ಯಾಗರಾಜ ರಸ್ತೆ, ಇಂಡಸ್ಟ್ರೀಯಲ್ ಸಬರ್ಬ್, ವಿಶ್ವೇಶ್ವರರಯ್ಯ ನಗರ, ಕೃಷ್ಣಮೂರ್ತಿಪುರಂ, ನಾಚನಹಳ್ಳಿ ಪಾಳ್ಯ, ಗುಂಡೂರಾವ್ ನಗರ, ಕನಕಗಿರಿ, ಅಶೋಕಪುರಂ, ಸರಸ್ವತಿಪುರಂ, ರೈಲ್ವೆ ಕಾರ್ಯಾಗಾರ, ಮಹದೇವಪುರ, ರಮಾಬಾಯಿನಗರ, ಶ್ರೀರಾಂಪುರ, ಜಯನಗರ, ಕೆ.ಜಿ.ಕೊಪ್ಪಲ್, ಶಿವಪುರ, ದೇವಲಾಪುರ ಹೋಬಳಿ, ಆದಿಚುಂಚನಗಿರಿ ರಸ್ತೆ, ಜೆ.ಪಿ.ನಗರ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳು.
ಜಲಪುರಿ, ಗಾಯತ್ರಿಪುರಂ, ಜ್ಯೋತಿನಗರ, ಉದಯಗಿರಿ, ಕ್ಯಾತಮಾರನಹಳ್ಳಿ, ಶಾಂತಿನಗರ  1 ಮತ್ತು 2ನೇ ಹಂತ, ಗಣೇಶ್ ನಗರ, ಸತ್ಯನಗರ, ಮಹದೇವಪುರ ರಸ್ತೆ, ಜರ್ಮನ್ ಪ್ರೆಸ್, ಉಸ್ಮಾನಿಯಾ ಬ್ಲಾಕ್, ಗೌಸಿಯಾ ನಗರ, ರಾಘವೇಂದ್ರ ನಗರ, ಗಿರಿಯಾಬೋವಿ ಪಾಳ್ಯ, ಯರಗನಹಳ್ಳಿ, ಬನ್ನೂರು ರಸ್ತೆ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ  ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗಲಿದ್ದು, ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: