ಸುದ್ದಿ ಸಂಕ್ಷಿಪ್ತ

ಡಿ.16 ರಂದು ಮುಖವರ್ಣ ಚಿತ್ರ ಸ್ಪರ್ಧೆ

ಮೈಸೂರು,ಡಿ.11-ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ವತಿಯಿಂದ ದಸರಾ ವಸ್ತುಪ್ರದರ್ಶನ-2018ರ ಅಂಗವಾಗಿ ಲಲಿತಕಲಾ ಮತ್ತುಕರಕುಶಲ ವಿಭಾಗದಿಂದ `ಮುಖವರ್ಣ ಚಿತ್ರ’ (Face painting) ಸ್ಪರ್ಧೆಯನ್ನು ಡಿ.16 ರಂದು ಬೆಳಿಗ್ಗೆ 10.30 ರಿಂದ 12.30 ರವರೆಗೆ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಆಯೋಜಿಸಲಾಗಿದೆ.

ಸದರಿ ಸ್ಪರ್ಧೆಗೆ ಹದಿನೆಂಟರಿಂದ ಇಪ್ಪತ್ತೈದು ವರ್ಷಗಳ ವಯೋಮಿತಿ ನಿಗಧಿಪಡಿಸಲಾಗಿದ್ದು, ಕಲಾವಿದರುಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿರುತ್ತದೆ. ಅರ್ಹ ಸ್ಪರ್ಧಿಗಳು ಅಗತ್ಯವಿರುವ ಕಲಾ ಸಾಮಾಗ್ರಿಗಳೊಂದಿಗೆ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸುವುದು.

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಎರಡು ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು. ಆಸಕ್ತರು ಡಿ.15 ರೊಳಗೆ ಮೊ.ಸಂ. 9916204642 ಗೆ ಕರೆ ಮಾಡಿ ಹೆಸರನ್ನು ನೋಂದಾಯಿಸಿಕೊಳ್ಳುವುದು. (ಎಂ.ಎನ್)

Leave a Reply

comments

Related Articles

error: