ಸುದ್ದಿ ಸಂಕ್ಷಿಪ್ತ

ಜ.3,4 ರಂದು ರಕ್ಷಣಾ ಪಿಂಚಣಿ ಅದಾಲತ್

ಮೈಸೂರು,ಡಿ.11-ಪ್ರಿನ್ಸಿಪಲ್ ಕನ್ ಟ್ರೋಲರ್ ಆಫ್ ಡಿಫೆನ್ಸ್ ಅಕೌಂಟ್ಸ್ (ಪೆನ್ಷನ್) ಅಲಹಬಾದ್ ಇವರು 2019ರ ಜನವರಿ 3,4 ರಂದು ಮಡಿಕೇರಿಯ ಲೋವರ್ ಕೊಡಗುಗೌಡಾ ಸಮಾಜ, ಜನರಲ್‍ತಿಮ್ಮಯ್ಯ ಸ್ಟೇಡಿಯಂ ಹತ್ತಿರ, ಅಪ್ಪಯ್ಯಗೌಡ ರಸ್ತೆ ಇಲ್ಲಿ ಪಿಂಚಣಿ ಅದಾಲತ್ ಹಮ್ಮಿಕೊಂಡಿದ್ದಾರೆ.

ರಕ್ಷಣಾ ಪಿಂಚಣಿ/ರಕ್ಷಣಾ ಸಿವಿಲ್ ಪಿಂಚಣಿ ಪಡೆಯುತ್ತಿರುವ ಮಾಜಿ ಸೈನಿಕರು ಮತ್ತು ಮಾಜಿ ಸೈನಿಕರ ಅವಲಂಬಿತರು ಪಿಂಚಣಿಗೆ ಸಂಬಂಧಿಸಿದ ಕುಂದು ಕೊರತೆಗಳು ಇದ್ದಲ್ಲಿ ನೇರವಾಗಿ ಪರಿಹಾರ ಕಂಡು ಕೊಳ್ಳಬಹುದಾಗಿದೆ.

ಕುಂದುಕೊರತೆ ನಿವಾರಣೆಗೆ ಮುಂಚಿತವಾಗಿ ಅರ್ಜಿಯನ್ನು ಪೂರ್ಣಗೊಳಸಿ ಸೈನ್ಯ ಸೇವಾ ದಾಖಲೆಗಳು, ಪೆನ್ಶ್‍ನ್ ಪೆಮೆಂಟ್‍ಆರ್ಡರ್, ಪಿಂಚಣಿ ಪಡೆಯುತ್ತಿರುವ ಖಜಾನೆ/ಬ್ಯಾಂಕಿನ ವಿವರವುಳ್ಳ ದಾಖಲೆಗಳ ಪ್ರತಿಯನ್ನು ಲಗತ್ತಿಸಿ Shri S K Sharma, Pension Adalat officer, Pr. CDA (Pensions), DrupadiGhat – Allahabad – 211014 ಇಲ್ಲಿಗೆ ಅಥವಾ ಇಮೇಲ್ [email protected] /Fax 0532-2421873 ಗೆ ಕಳುಹಿಸಬಹುದಾಗಿದೆ.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂ.ಸಂ. 0821-2425240, ಉಪ ನಿರ್ದೇಶಕರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಮೈಸೂರು, ಇವರನ್ನು ಸಂರ್ಕಿಸಬಹುದಾಗಿದೆ. (ಎಂ.ಎನ್)

Leave a Reply

comments

Related Articles

error: