ಕರ್ನಾಟಕಪ್ರಮುಖ ಸುದ್ದಿ

ಸಿಲಿಕಾನ್ ಸಿಟಿಯಲ್ಲಿ ಪ್ರವಾಸಿ ಭಾರತೀಯ ದಿವಸ್ ಗೆ ಚಾಲನೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಪ್ರವಾಸಿ ಭಾರತೀಯ ದಿವಸ್ ಆಯೋಜನೆಗೊಂಡಿದ್ದು, ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವ ವಿಜಯ್ ಗೋಯಲ್ ಅವರು ಶನಿವಾರದಂದು ಚಾಲನೆ ನೀಡಿದರು.

ಪ್ರವಾಸಿ ಭಾರತೀಯರನ್ನು ಸ್ವಾಗತಿಸಿ ಭಾಷಣ ಆರಂಭಿಸಿದ ಗೋಯಲ್ ಅವರು, ಭಾರತೀಯ ಯುವಸಮುದಾಯ ವಿದೇಶಗಳಲ್ಲಿ ಸಾಧನೆ ಮಾಡಿ ವಿಶ್ವದ ಎಲ್ಲೆಡೆ ದೇಶದ ಹೆಸರನ್ನು ಉತ್ತುಂಗಕ್ಕೆ ಏರಿಸಿದ್ದಾರೆ. ದೇಶದ ಯುವಕರು ಅಮೆರಿಕ ಸಿಲಿಕಾನ್ ವ್ಯಾಲಿಯಿಂದ ಹಿಮಾಲಯದ ತುದಿವರೆಗೆ ಭಾರತ ಮಾತೆ ಕೀರ್ತಿಯನ್ನು ಪಸರಿಸಿದ್ದಾರೆ. ದೇಶದ ಸಂಸ್ಕೃತಿ ತಿಳಿಯುವ ಕಾರ್ಯ ಇನ್ನು ಹೆಚ್ಚೆಚ್ಚು ನಡೆಯಬೇಕಿದೆ. ಪ್ರಧಾನಿ ಮೋದಿ ಯುವ ಜನರಿಗೆ ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.

ಶನಿವಾರ ಆರಂಭಗೊಂಡ ಪ್ರವಾಸಿ ದಿವಸ್ 3 ದಿನಗಳ ಕಾಲ ನಡೆಯಲಿದ್ದು, ಕಾರ್ಯಕ್ರಮದಲ್ಲಿ 4000 ಅನಿವಾಸಿ ಭಾರತೀಯರು ಸೇರಿದಂತೆ 6000ಕ್ಕೂ ಅಧಿಕ ಪ್ರತಿನಿಧಿಗಳು, ಉದ್ಯೋಗಿಗಳು, ದೇಶ-ವಿದೇಶಗಳ ಗಣ್ಯರು ಭಾಗವಹಿಸಲಿದ್ದಾರೆ. ಮೊದಲ ದಿನ ಯುವ ಪ್ರವಾಸಿ ದಿವಸ್ ನಡೆಯಲಿದ್ದು, ಭಾನುವಾರದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳಲಿದ್ದಾರೆ. ಸೋಮವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ದೇಶಪಾಂಡೆ ಮೊದಲಾದವರು ಭಾಗವಹಿಸಲಿದ್ದಾರೆ.

ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಇಂತಹದ್ದೊಂದು ಸಮಾವೇಶ ನಡೆಸಲು ದೊರಕಿರುವ ಅವಕಾಶ ಸಮರ್ಥವಾಗಿ ಬಳಸಿಕೊಂಡು ಬಂಡವಾಳ ಹೂಡಿಕೆ ಆಕರ್ಷಿಸಲು ಕರ್ನಾಟಕ ಸರ್ಕಾರವೂ ಉತ್ಸುಕವಾಗಿದೆ.

 

Leave a Reply

comments

Related Articles

error: