ಕರ್ನಾಟಕಪ್ರಮುಖ ಸುದ್ದಿ

ಛತ್ತೀಸ್‌ಗಢ : ಬಿಜೆಪಿಗೆ ಸೋಲು, ರಾಜೀನಾಮೆಗೆ ಮುಂದಾದ ರಮಣ್ ಸಿಂಗ್‌

ರಾಯಪುರ (ಡಿ.11): ಛತ್ತೀಸ್‌ಗಢದಲ್ಲಿ ಮೂರು ಬಾರಿ ಸರ್ಕಾರ ರಚಿಸಿದ್ದ ಬಿಜೆಪಿ ಈ ಬಾರಿ ಹಿನಾಯ ಸೋಲಿನತ್ತ ದಾಪುಗಾಲು ಹಾಕುತ್ತಿದ್ದಂತೆ ಮುಖ್ಯಮಂತ್ರಿ ರಮಣ ಸಿಂಗ್ ಅವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಸ್ವತಃ ರಮಣ್ ಸಿಂಗ್ ಅವರು ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದು, ಸೋಲುವ ಭೀತಿ ಎದುರಿಸುತ್ತಿದ್ದಾರೆ. ಹಾಗಾಗಿ ಅವರು ಚುನಾವಣೆ ಸೋಲಿನ ಜವಾಬ್ದಾರಿ ಹೊತ್ತು ರಾಜೀನಾಮೆಗೆ ಮುಂದಾಗಿದ್ದಾರೆ. ಛತ್ತೀಸ್‌ಗಢ ಚುನಾವಣೆಯಲ್ಲಿ ಈವರೆಗಿನ ಫಲಿತಾಂಶದ ಮಟ್ಟಿಗೆ. ಕಾಂಗ್ರೆಸ್‌ 64 ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ. ಒಟ್ಟು 90 ಕ್ಷೇತ್ರಗಳಿರುವ ಛತ್ತೀಸ್‌ಘಡದಲ್ಲಿ ಭಾರಿ ಗೆಲುವಿನತ್ತ ಕಾಂಗ್ರೆಸ್ ದಾಪುಗಾಲು ಹಾಕಿದೆ.

ಕಳೆದ ಮೂರು ಬಾರಿ ಅಧಿಕಾರ ಮಾಡಿದ್ದ ಬಿಜೆಪಿ ಕೇವಲ 18 ಸೀಟುಗಳಲ್ಲಷ್ಟೆ ಮುನ್ನಡೆಯಲ್ಲಿದೆ. ಬಿಎಸ್‌ಪಿ 6 ಮತ್ತು ಪಕ್ಷೇತರರು ಎರಡು ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಛತ್ತೀಸ್‌ಗಢದ ಕಳೆದ ಚುನಾವಣೆಯಲ್ಲಿ ಬಿಜೆಪಿಯು 49 ಸ್ಥಾನಗಳಲ್ಲಿ ಗೆದ್ದು ಸರ್ಕಾರ ರಚಿಸಿತ್ತು. ಕಾಂಗ್ರೆಸ್ ಪಕ್ಷವು 39 ಸ್ಥಾನಗಳಲ್ಲಿ ಗೆದ್ದಿತ್ತು. ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿಗಿಂತಲೂ ಹೆಚ್ಚು ಸ್ಥಾನಗಳನ್ನು ಗೆಲ್ಲುವತ್ತ ಕಾಂಗ್ರೆಸ್ ಹೆಜ್ಜೆ ಇಟ್ಟಿದೆ. (ಎನ್.ಬಿ)

Leave a Reply

comments

Related Articles

error: