ಮೈಸೂರು

ಚಾಮುಂಡಿ ದೇವಸ್ಥಾನದ ಸುತ್ತಮುತ್ತ ಸ್ವಚ್ಛತಾ ಅಭಿಯಾನ

ಚಾಮುಂಡಿ ಬೆಟ್ಟದಲ್ಲಿ  ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶವನ್ನು ಶನಿವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ರಾಜೀವ್ ಸ್ನೇಹ ಬಳಗದ ವತಿಯಿಂದ ಸ್ವಚ್ಛಗೊಳಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

ಸ್ವಚ್ಛತಾ ಅಭಿಯಾನಕ್ಕೆ ಜಿಲ್ಲಾ ಸಹಕಾರಿ ಒಕ್ಕೂಟಗಳ ಅಧ್ಯಕ್ಷ ಹೆಚ್.ವಿ.ರಾಜೀವ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಮೈಸೂರು ಈಗಾಗಲೇ ಎರಡು ಬಾರಿ ಸ್ವಚ್ಛ ನಗರಿ ಎಂದು ಗುರುತಿಸಿಕೊಂಡು ಪ್ರಶಸ್ತಿಯನ್ನು ಪಡೆದಿದೆ. ಈ ಬಾರಿಯೂ ಸ್ವಚ್ಛನಗರಿ ಎನ್ನುವ ಪ್ರಶಸ್ತಿಯನ್ನು ಪಡೆಯುವ ಮೂಲಕ ಹ್ಯಾಟ್ರಿಕ್ ಸಾಧಿಸಬೇಕು. ಸ್ವಚ್ಛ ಸರ್ವೇಕ್ಷಣ್ ಗಾಗಿ ಕೇಂದ್ರದಿಂದ ತಂಡ ಬಂದಿದ್ದು, ಮೈಸೂರಿನ ಸ್ವಚ್ಛತೆಯನ್ನು ಗುರುತಿಸಲಿದೆ. ಸ್ವಚ್ಛತೆಯನ್ನು ಗುರುತಿಸಲು ಆಗಮಿಸಿದ ತಂಡಕ್ಕೆ ನಮ್ಮ ನಗರ ಸಂಪೂರ್ಣ ಸ್ವಚ್ಛವಾಗಿ ಗೋಚರಿಸಬೇಕು ಎಂದರು.

ಈಗ ಚಾಮುಂಡಿ ಬೆಟ್ಟಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸದಿರುವ ಹಿನ್ನೆಲೆಯಲ್ಲಿ ಈ ದಿನ ಸ್ವಚ್ಛತಾ ಕಾರ್ಯವನ್ನು ಆಯೋಜಿಸಿದ್ದೇವೆ. ಚಾಮುಂಡಿ ದೇವಸ್ಥಾನದ ಸುತ್ತಮುತ್ತಲ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಬಿದ್ದಿದ್ದ, ಕಸ ಕಡ್ಡಿಗಳು, ಪ್ಲಾಸ್ಟಿಕ್ ಗಳನ್ನು ತೆಗೆದು ಸ್ವಚ್ಛಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಸುಮಾರು 50ಕ್ಕೂ ಅಧಿಕ ಕಾರ್ಯಕರ್ತರು ಸ್ವಚ್ಛತಾ ಅಭಿಯಾನದಲ್ಲಿ ಸ್ವಯಂಪ್ರೇರಿತರಾಗಿ ತೊಡಗಿಸಿಕೊಂಡರು. ಸುಮಾರು 50 ರಿಂದ 60ಕ್ಕೂ ಹೆಚ್ಚು ಕಸದ ಚೀಲಗಳು ಕಂಡು ಬಂದವು. ಕಸಗಳನ್ನು ಹಸಿ ಕಸ ಒಣಕಸಗಳಾಗಿ ಬೇರ್ಪಡಿಸಿ ಕೊಂಡೊಯ್ಯಲಾಗಿದೆ.

Leave a Reply

comments

Related Articles

error: