ಮೈಸೂರು

ಸಾಲಬಾಧೆ ತಾಳಲಾರದೇ ರೈತ ಆತ್ಮಹತ್ಯೆ

ಸಾಲ ಬಾಧೆ ತಾಳಲಾರದೇ ರೈತನೋರ್ವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ  ಶರಣಾದ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನಲ್ಲಿ  ನಡೆದಿದೆ.

ಮೃತನನ್ನು  ಹೆಚ್.ಡಿ.ಕೋಟೆ ತಾಲೂಕಿನ ಹೊಸಹಳ್ಳಿ ಗ್ರಾಮದ ನಿವಾಸಿ ಸುರೇಶ್(43) ಎಂದು ಗುರುತಿಸಲಾಗಿದೆ.
ಈತ 9 ಲಕ್ಷ ರೂ.  ಸಾಲ ಮಾಡಿಕೊಂಡಿದ್ದು, ಬ್ಯಾಂಕಿನಲ್ಲಿ 6ಲಕ್ಷ,  ಹಾಗೂ ಕೈಸಾಲ 3.05ಲಕ್ಷ ಇತ್ತು ಎನ್ನಲಾಗಿದೆ. ಹಣ ಮರುಪಾವತಿಸಲಾಗದ ಹಿನ್ನೆಲೆಯಲ್ಲಿ ನೊಂದು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ.
ಸ್ಥಳಕ್ಕೆ ಶಾಸಕ ಚಿಕ್ಕಮಾದು ಹಾಗೂ ತಹಶೀಲ್ದಾರ್ ನಂಜುಂಡಯ್ಯ ಭೇಟಿ ನೀಡಿದರು.
ಎಚ್‌.ಡಿ.ಕೋಟೆ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

Leave a Reply

comments

Related Articles

error: