ಸುದ್ದಿ ಸಂಕ್ಷಿಪ್ತ

12 ರಂದು ಮೈಸೂರಿಗೆ 18 ದೇಶಗಳ, 60 ಪ್ರತಿನಿಧಿಗಳ ಭೇಟಿ ಹಾಗೂ ಸಮಾಲೋಚನಾ ಸಭೆ

ಮೈಸೂರು,ಡಿ.11:- ಸೂಕ್ಷ್ಮ ಹಾಗೂ ಸಣ್ಣ ಕೈಗಾರಿಕೆಗಳಿಗೆ ಹಣಕಾಸು ಸೌಲಭ್ಯ, ಒಟ್ಟಾರೆ ಗುಣ ನೀತಿ, ಕೈಗಾರಿಕೆಗಳಿಗೆ ಸರ್ಕಾರದ ಬೆಂಬಲ ಸೇವೆ, ಕೈಗಾರಿಕಾಭಿವೃದ್ದಿಯಲ್ಲಿ ಕೈಗಾರಿಕಾ ಸಂಘಟನೆಗಳ ಪಾತ್ರದ ಬಗ್ಗೆ ನೇರವಾಗಿ ತಿಳಿಯಲು ಹಿಂದುಳಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ಈಜಿಪ್ಟ್, ಅಪ್ಘಾನಿಸ್ತಾನ್, ಜೊರ್ಡಾನ್, ತಜಕಿಸ್ತಾನ್, ಸಿರಿಯಾ, ಸುಡಾನ್, ತಾಂಜನೀಯಾ, ಗಾನ, ಮಾಲವೀಸ್, ಹೋಂಡುರಾಸ್ ಜಿಂಬಾಬ್ವೆ ಮುಂತಾದ 18 ದೇಶಗಳ ಸರ್ಕಾರದ ವಿವಿಧ ಇಲಾಖೆಗಳ ಹಾಗೂ ಹಣಕಾಸು ಸಂಸ್ಥೆಗಳ  60 ಕ್ಕೂ ಹೆಚ್ಚು ವಿದೇಶಿ ಪ್ರತಿನಿಧಿಗಳು ನಾಳೆ ಅಂದರೆ ಡಿ. 12 ರಂದು, ಬೆಳಿಗ್ಗೆ 10.30 ಕ್ಕೆ  ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷರು ಹಾಗೂ ಮಾಜಿ ಶಾಸಕ ವಾಸು, ಮತ್ತು ಸೂಕ್ಮ, ಸಣ್ಣ ಮತ್ತು ಮದ್ಯಮ ಉದ್ಯಮಗಳ ಪರಿಷತ್ತಿನ ಅಧ್ಯಕ್ಷರಾದ ರವಿಕೋಟಿ ಮತ್ತು  ಇತರ ಪದಾಧಿಕಾರಿಗಳೊಡನೆ ಸಮಾಲೋಚಿಸಲಿದ್ದಾರೆ.

ಸಮಾಲೋಚನೆಯ ನಂತರ ನಗರದ ಮೈಸೂರು ದಕ್ಷಿಣ ಬಾಗದ ಉದ್ಬೂರು ರಸ್ತೆಯ ಎನ್.ಜೆ ಸ್ಟೆಷನರೀಸ್, ಪೈಲ್ಸ್ ಮತ್ತು ನೋಟ್‍ಬುಕ್ ತಯಾರಿಕಾ ಘಟಕದ ನಿರ್ವಹಣೆಯ ಬಗ್ಗೆ ತಿಳಿಯಲು ಭೇಟಿ ನೀಡಲಿದ್ದಾರೆ. ಹೈದರಬಾದ್‍ನಲ್ಲಿರುವ ಭಾರತ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮಂತ್ರಾಲಯದ ರಾಷ್ಟ್ರೀಯ ತರಬೇತಿ ಸಂಸ್ಥೆಯ ತರಬೇತಿ ಯೋಜನೆಯ ಒಂದು ಭಾಗವಾದ ಅಧ್ಯಯನ ಪ್ರವಾಸದ ಮೇರೆಗೆ ಈ ತಂಡ ಮೈಸೂರಿಗೆ ಬಂದಿದೆ,  ಎಂದು ಮೈಸೂರು ಕೈಗಾರಿಕೆಗಳ ಸಂಘದ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ರವರು ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್

Leave a Reply

comments

Related Articles

error: