ದೇಶಪ್ರಮುಖ ಸುದ್ದಿ

ಮತ್ತೆ ಟಿ.ಆರ್.ಎಸ್‍ ಜಯಭೇರಿ: ತೆಲಂಗಾಣದಲ್ಲಿ ನಡಿಲಿಲ್ಲ ಡಿಕೆಶಿ ಮ್ಯಾಜಿಕ್!

ಹೈದರಾಬಾದ್ (ಡಿ.11): ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಎಂದೇ ಖ್ಯಾತಿ ಪಡೆದುಕೊಂಡಿರುವ ಕರ್ನಾಟಕ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ರಣತಂತ್ರಗಳು ತೆಲಂಗಾಣದಲ್ಲಿ ಅಲ್ಲಿನ ಮುಖ್ಯಮಂತ್ರಿ ಕೆ.ಸಿ ಚಂದ್ರಶೇಖರ್ ರಾವ್ ಅವರ ಮುಂದೆ ಟುಸ್ಸಾಗಿವೆ.

ತೆಲಂಗಾಣದಲ್ಲಿ ಮಹಾಮೈತ್ರಿ ಕೂಟಕ್ಕೆ ಗೆಲುವು ದಕ್ಕಿಸಿಕೊಡುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ ಪಕ್ಷದ ಚುನಾವಣಾ ಉಸ್ತುವಾರಿ ಜವಾಬ್ದಾರಿಯನ್ನು ರಣತಂತ್ರಗಳ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ, ತೆಲಂಗಾಣದಲ್ಲಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ಮುಂದೆ ಡಿಕೆ ಶಿವಕುಮಾರ್ ತಂತ್ರಗಳೆಲ್ಲ ವಿಫಲವಾಗಿವೆ.

119 ವಿಧಾನಸಭೆ ಸ್ಥಾನಗಳನ್ನು ಹೊಂದಿರುವ ತೆಲಂಗಾಣದಲ್ಲಿ ಟಿಆರ್ ಎಸ್ 80 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಪಡೆದು ಸ್ಪಷ್ಟ ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಎಲ್ಲ ಸಮೀಕ್ಷೆಗಳನ್ನೂ ಬುಡಮೇಲು ಮಾಡುವಂತಹ ವಿಜಯ ಸಾಧಿಸಿರುವ ಟಿಆರ್‍ಎಸ್, ಮತ್ತೆ ಅಧಿಕಾರದ ಗದ್ದುಗೆ ಏರಿದೆ. (ಎನ್.ಬಿ)

Leave a Reply

comments

Related Articles

error: