ಸುದ್ದಿ ಸಂಕ್ಷಿಪ್ತ

ಡಿ.13, 14 ರಂದು ಸಂಗೀತ ಕಾರ್ಯಕ್ರಮ

ಮೈಸೂರು,ಡಿ.11-ಪ್ರಸಿದ್ಧ ಮೃದಂಗ ವಾದಕ ಗಾನಕಲಾ ಭೂಷಣ ಪಿ.ಜಿ.ಲಕ್ಷ್ಮೀನಾರಾಯಣ ಅವರ 12ನೇ ವರ್ಷದ ಸಂಸ್ಮರಣಾರ್ಥ ಪಿಜಿಎಲ್ ಸಂಸ್ಮರಣಾ ವೇದಿಕೆ ವತಿಯಿಂದ ಡಿ.13, 14 ರಂದು ಸಂಜೆ 6 ಗಂಟೆಗೆ ನಾದಬ್ರಹ್ಮ ಸಂಗೀತಾ ಸಭಾದಲ್ಲಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಡಿ.13 ರಂದು ಪಿ.ಜಿ.ಲಕ್ಷ್ಮೀನಾರಾಯಣ ಶಿಷ್ಯರಿಂದ ನಾದಲಯ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ವಿ.ಸಿ.ಎನ್.ತ್ಯಾಗರಾಜು ಮತ್ತು ವಿ.ಸ್ಮಿತ ಶ್ರೀಕಿರಣ್ ಅವರು ಪಿಟೀಲು ಮತ್ತು ವೇಣುವಾದನದಲ್ಲಿ ಸಹಕರಿಸಲಿದ್ದಾರೆ.

ಡಿ.14 ರಂದು ಗಾನಕಲಾ ಭೂಷಣ ವಿ.ನಾಗಮಣಿ ಶ್ರೀನಾಥ್ ಅವರನ್ನು ಗೌರವಿಸಲಾಗುವುದು. ಕೆ.ವಿ.ಮೂರ್ತಿ ಯವರು ಅಧ್ಯಕ್ಷತೆ ವಹಿಸಲಿದ್ದಾರೆ. ವಿ.ನಾಗಮಣಿ ಶ್ರೀನಾಥ್ ಅವರಿಂದ ಗಾಯನ ಕಾರ್ಯಕ್ರಮವಿದ್ದು, ವಿ.ಎನ್.ಎನ್.ಗಣೇಶ್ ಕುಮಾರ್ ಪಿಟೀಲಿನಲ್ಲಿ, ವಿ.ಗಾನಕಲಾಶ್ರೀ ಬಿ.ಸಿ.ಮಂಜುನಾಥ್ ಮೃದಂಗದಲ್ಲಿ, ವಿ.ಸುನಾದ್ ಆನೂರು ಖಂಜಿರದಲ್ಲಿ ಸಾಥ್ ನೀಡಲಿದ್ದಾರೆ. (ಎಂ.ಎನ್)

Leave a Reply

comments

Related Articles

error: