ಮೈಸೂರು

ನನ್ನ ಅವಧಿಯ ಸೇವೆ ತೃಪ್ತಿ ತಂದಿದೆ: “ಬ್ರಹ್ಮನಿಧಿ” ಲೋಕಾರ್ಪಣೆಗೊಳಿಸಿದ ಪ್ರೊ.ಕೆ.ಎಸ್.ರಂಗಪ್ಪ

‘ಬ್ರಹ್ಮನಿಧಿ’ ಗ್ರಂಥವು ನನ್ನ ಆಡಳಿತಾವಧಿಯಲ್ಲಿಯೇ ಲೋಕಾರ್ಪಣೆಗೊಂಡಿರುವುದು ಸಂತಸ ತಂದಿದೆ ಎಂದು ಮೈಸೂರು ವಿವಿಯ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ತಿಳಿಸಿದರು.

ಅವರು ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಶ್ರೀತತ್ವನಿಧಿ 4ನೇ ಸಂಪುಟದ ‘ಬ್ರಹ್ಮನಿಧಿ’ ಕನ್ನಡ ಅನುವಾದಿತ ಗ್ರಂಥವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.

125 ವರ್ಷಗಳ ಇತಿಹಾಸವಿರುವ ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾಲಯ ಸಂಸ್ಥೆಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯ ವತಿಯಿಂದ ಸಂಶೋಧನೆಗಳು ಹೆಚ್ಚಿನ ಮಟ್ಟದಲ್ಲಿ ನಡೆದು ಉತ್ತಮ ಗ್ರಂಥಗಳು ಪ್ರಕಟವಾಗಲಿ. ಕನ್ನಡ, ಇತಿಹಾಸ, ಪ್ರಾಚ್ಯವಸ್ತು ಅಧ್ಯಯನ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ವಿದ್ಯಾರ್ಜನೆಗೆ ನೆರವಾಗಲಿ ಎಂದು ಆಶಿಸಿದರು. ನನ್ನ ಸೇವಾವಧಿಯಲ್ಲಿ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡು ಉತ್ತಮ ಕೆಲಸ ಮಾಡಲಾಗಿದೆ. ನನ್ನ ಸೇವೆಯೂ ನನಗೆ ತೃಪ್ತಿ ತಂದಿದೆ ಎಂದರು.

ಕುಲಸಚಿವ ಪ್ರೊ.ಡಾ.ಆರ್.ರಾಜಣ್ಣ ಮಾತನಾಡಿ, ಹಸ್ತಪ್ರತಿಗಳನ್ನು 100 ವರ್ಷಗಳಿಂದ ಕಾಪಾಡಿಕೊಂಡು ಬಂದಿರುವ ಸಂಸ್ಥೆಯು ನಾವೆಲ್ಲ ಹೆಮ್ಮೆಪಡುವಂತೆ ಮಾಡಿದೆ. ಪ್ರಾಚ್ಯವಿದ್ಯಾ ಸಂಶೋಧನಾಲಯವೆಂದರೆ ಹಸ್ತಪ್ರತಿ ಭಂಡಾರವೆಂದರ್ಥ. ಎಲ್ಲ ಭಾರತೀಯ ಶಾಸ್ತ್ರಗಳ ಸಾರವನ್ನು ಹಾಗೂ ಇತರ ಕೃತಿಗಳನ್ನು ಆಧರಿಸಿ ಪರಾಮರ್ಶಿಸಿ ರಚಿಸಲಾದ ಕೃತಿಗಳು ಸಂಸ್ಥೆಯಲ್ಲಿದ್ದು ಸಂಶೋಧನಾ ವಿದ್ಯಾರ್ಥಿಗಳಿಗೆ ಬಹುಉಪಯುಕ್ತವಾಗಿದೆ ಎಂದರು.

‘ಬ್ರಹ್ಮನಿಧಿ’ ಗ್ರಂಥದ ಅನುವಾದಕ ಡಾ.ಟಿ.ವಿ.ಸತ್ಯನಾರಾಯಣ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ನಿರ್ದೇಶಕಿ ಪ್ರೊ.ಡಾ.ಹೆಚ್.ಪಿ.ದೇವಕಿ ಉಪಸ್ಥಿತರಿದ್ದರು.

Leave a Reply

comments

Related Articles

error: