ಪ್ರಮುಖ ಸುದ್ದಿ

ರೈಲಿಗೆ ತಲೆ ಕೊಟ್ಟು ವೃದ್ಧ ಆತ್ಮಹತ್ಯೆ

ರಾಜ್ಯ(ಬೆಂಗಳೂರು)ಡಿ.12;- ರೈಲಿಗೆ ತಲೆ ಕೊಟ್ಟು ವೃದ್ಧರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರ ಹೊರವಲಯದ ಸಿದ್ಧೇನಾಯಕನಹಳ್ಳಿ ಬಳಿ ರೈಲು ಹಳಿಗಳ ಮೇಲೆ ಮೃತದೇಹ ಪತ್ತೆಯಾಗಿದೆ.

ದೊಡ್ಡಬಳ್ಳಾಪುರ ರೈಲ್ವೇ ಪೊಲೀಸರು ಸ್ಥಳಕ್ಕೆ ಭೆಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಮಾರು 60 ವರ್ಷದ ವೃದ್ಧರಾಗಿದ್ದು, ಬಿಳಿ ಷರ್ಟ್,ಬಿಳಿ ಪಂಚೆ ಧರಿಸಿದ್ದು,ವಿಳಾಸ ಪತ್ತೆಯಾಗಿಲ್ಲ. ಸಂಬಂಧಪಟ್ಟವರು ದೊಡ್ಡಬಳ್ಳಾಪುರ ರೈಲ್ವೇ ಪೋಲೀಸರನ್ನು ಸಂಪರ್ಕಿಸಲು ಮನವಿ ಮಾಡಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: