ಕರ್ನಾಟಕಪ್ರಮುಖ ಸುದ್ದಿ

ಕೊಡಗು ಅತಿವೃಷ್ಟಿ ಸಮೀಕ್ಷೆ ವರದಿಯ ಬಳಿಕ ನದಿ ಹೂಳೆತ್ತುವ ಕಾಮಗಾರಿ: ಡಿಕೆಶಿ

ಬೆಳಗಾವಿ (ಡಿ.12): ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಅತಿವೃಷ್ಟಿ ಹಾಗೂ ಭೂ-ಕುಸಿತದಿಂದ ಆಗಿರುವ ನಷ್ಟದ ಕುರಿತು ತಜ್ಞರಿಂದ ಸಮೀಕ್ಷೆ ನಡೆಸಲಾಗುತ್ತಿದೆ. ಸಮೀಕ್ಷೆಯ ವರದಿ ಬಂದ ಕೂಡಲೇ ನದಿಗಳಲ್ಲಿನ ಹೂಳೆತ್ತುವ ಕಾಮಗಾರಿ ಆರಂಭಿಸಲಾಗುವುದು ಎಂದು ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ. ಕೆ. ಶಿವಕುಮಾರ್ ಅವರು ಮಂಗಳವಾರ ಹೇಳಿದರು.

ವಿಧಾನಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯೆ ವೀಣಾ ಅಚ್ಚಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಈ ಭಾಗದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಬೃಹತ್ ಪ್ರಮಾಣದ ಹಾನಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಮೀಕ್ಷಾ ಕಾರ್ಯ ನಡೆಯುತ್ತಿದೆ. ವರದಿಯ ಬಳಿಕ ಎಲ್ಲೆಲ್ಲಿ ಹೂಳು ಸಂಗ್ರಹವಾಗಿ ನದಿ ಹರಿಯುವ ಮಾರ್ಗಕ್ಕೆ ವ್ಯತ್ಯಯವಾಗಿದೆಯೋ ಅಲ್ಲಲ್ಲಿ ಹೂಳು ತೆಗೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು. (ಎನ್.ಬಿ)

Leave a Reply

comments

Related Articles

error: