ದೇಶ

ಕಪ್ಪುಹಣದ ವಿರುದ್ಧ ಸಮರ: ಹಳೆ ಬ್ಯಾಂಕ್ ವ್ಯವಹಾರ ಪರಿಶೀಲನೆಗೆ ಮುಂದಾದ ಕೇಂದ್ರ ಸರಕಾರ

ನವದೆಹಲಿ: ಕಾಳಧನ ಮತ್ತು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಕೇಂದ್ರ ಸರಕಾರ ಕಾಳಧನಿಕರಿಗೆ ಮತ್ತೊಂದು ಶಾಕ್ ನೀಡಲು ತಯಾರಾಗಿದೆ. ಕಪ್ಪುಹಣವನ್ನು ಹೊರಗೆಳೆಯಲು 6 ವರ್ಷಗಳ ಹಿಂದಿನ ಬ್ಯಾಂಕ್ ವ್ಯವಹಾರಗಳನ್ನು ಪರಿಶೀಲಿಸಲು ಚಿಂತನೆ ನಡೆಸುತ್ತಿದೆ.

ಹಳೆಯ ಬ್ಯಾಂಕ್ ವ್ಯವಹಾರಗಳನ್ನು ಪರಿಶೀಲಿಸಲು ತೆರಿಗೆ ಅಧಿಕಾರಿಗಳಿಗೆ ಅನುವು ಮಾಡಿಕೊಡುವ ಸಂಬಂಧ ಆದಾಯ ತೆರಿಗೆ ಕಾಯಿದೆಗೆ ತಿದ್ದುಪಡಿ ತರಲು ಸರಕಾರ ನಿರ್ಧರಿಸಿದೆ. ಮುಂದಿನ ಬಜೆಟ್‌ನಲ್ಲಿ ಈ ಕುರಿತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ. ಕಾಯಿದೆಗೆ ತಿದ್ದುಪಡಿ ತಂದಲ್ಲಿ ಹಳೆಯ ಕೇಸುಗಳನ್ನು ತೆರೆಯಲು ತೆರಿಗೆ ಅಧಿಕಾರಿಗಳಿಗೆ ಅನುಮತಿ ದೊರೆಯಲಿದೆ.

ಪರಿಶೀಲನೆ ವೇಳೆ ದಶಕದ ಹಿಂದಿನ ಅಕ್ರಮ ಸಂಪತ್ತು ಪತ್ತೆಯಾದಲ್ಲಿ, ಆಸ್ತಿ ಖರೀದಿಸಿದ ವರ್ಷ ಯಾವುದೇ ಇರಲಿ, ಆಸ್ತಿಯ ಈಗಿನ ಮೌಲ್ಯದ ಆಧಾರದಲ್ಲಿ ತೆರಿಗೆ ವಿಧಿಸಲಾಗುತ್ತದೆ ಎನ್ನಲಾಗಿದೆ.

Leave a Reply

comments

Related Articles

error: