ಪ್ರಮುಖ ಸುದ್ದಿಮೈಸೂರು

ಡಿ.15,16ರಂದು ಬ್ರಾಹ್ಮಣರ ಜಿಲ್ಲಾ ಸಮಾವೇಶ

ಸಿಎಂ ಕುಮಾರಸ್ವಾಮಿಯವರಿಂದ ಚಾಲನೆ

ಮೈಸೂರು,ಡಿ.12 : ತ್ರಿಮತಸ್ಥ ಬ್ರಾಹ್ಮಣರ ಜಾಗೃತಿಗಾಗಿ ಮೈಸೂರು ನಗರ ಹಾಗೂ ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಎರಡು ದಿನಗಳ ಕಾಲ ಬ್ರಾಹ್ಮಣ ಬೃಹತ್ ಸಮಾವೇಶವನ್ನು ನಗರದಲ್ಲಿ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಹಾಗೂ ಸಮೇಳನದ ಸರ್ವಾಧ್ಯಕ್ಷ ಡಿ.ಟಿ.ಪ್ರಕಾಶ್ ತಿಳಿಸಿದರು.

ನಗರದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಡಿ.15 ಮತ್ತು 16ರಂದು ನಡೆಯುವ ಸಮಾವೇಶವನ್ನು ಡಿ.15ರ ಬೆಳಗ್ಗೆ 10.30ಕ್ಕೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಸಚಿವ ಸಾ.ರಾ.ಮಹೇಶ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕರಾದ ಎಸ್.ಎ.ರಾಮದಾಸ್, ಸುರೇಶ್ ಕುಮಾರ್, ರವಿಸುಬ್ರಹ್ಮಣ್ಯ, ಬಿ.ಸಿ.ನಾಗೇಶ್, ವಿಧಾನ ಪರಿಷತ್ ಸದಸ್ಯ ಕೆ.ವಿ.ನಾರಾಯಣಸ್ವಾಮಿ, ಮಾಜಿ ಶಾಸಕ ವೈ.ಎಸ್.ವಿ.ದತ್ತ ಹಾಗೂ ಇನ್ನಿತರ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎರಡು ದಿನ ನಡೆಯುವ ಸಮಾವೇಶವು ಧಾರ್ಮಿಕ ಪೂಜಾ ಕೈಕಂಕರ್ಯದಿಂದ ಆರಂಭವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಗೋಷ್ಠಿಗಳು, ಚರ್ಚೆ, ಸಂವಾದಗಳು ನಡೆಯಲಿದ್ದು, ಡಿ.16ರ ಬೆಳಗ್ಗೆ 7.30ರಿಂದ ಶಂಕರಮಠದಿಂದ ಆಶ್ರಮದವರೆಗೂ ಶೋಭಾಯಾತ್ರೆ ಆಯೋಜಿಸಿದ್ದು ಸುಮಾರು ಹತ್ತು ಸಾವರ ವಿಪ್ರರು ಭಾಗಿಯಾಲಿದ್ದಾರೆ ಎಂದು ತಿಳಿಸಿದರು.

ಎರಡು ದಿನಗಳ ಕಾಲ ನಡೆಯುವ ಸಮಾವೇಶದಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ತ್ರಿಮತಸ್ಥ ಬ್ರಾಹ್ಮಣರು ಪಾಲ್ಗೊಳ್ಳುವ ಮೂಲಕ ಸರ್ಕಾರಕ್ಕೆ ಒಗ್ಗಟ್ಟಿನ ಸಂದೇಶ ಸಾರುವ ಮೂಲಕ ಯಶಸ್ವಿಗೊಳಿಸಬೇಕಿದ್ದು ಈ ಹಿನ್ನಲೆಯಲ್ಲಿ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕೋರಿದರು.

ಸಂಘದ ಕಾರ್ಯಾದ್ಯಕ್ಷ ಕೃಷ್ಣದಾಸ್ ಪುರಾಣಿಕ್, ಪ್ರಧಾನ ಕಾರ್ಯದರ್ಶಿ ಮಾ.ವಿ.ರಾಮಪ್ರಸಾದ್, ಅಪೂರ್ವ ಸುರೇಶ್, ಪ್ರಚಾರ ಸಮಿತಿಯ ಎಂ.ಡಿ.ಪಾರ್ಥಸಾರಥಿ ಮೊದಲಾದವರು ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: