
ಮೈಸೂರು
ಸಂಸ್ಥಾಪನಾ ದಿನಾಚರಣೆ : ಸನ್ಮಾನ
ಮೈಸೂರು,ಡಿ.12:- ಹಿರಿಯ ನಾಗರಿಕರ ವಿಶ್ವಸ್ಥ ಮಂಡಳಿ ಮತ್ತು ಹಿರಿಯ ನಾಗರಿಕರ ಮಂಡಳಿ ವತಿಯಿಂದ ಜಯಲಕ್ಷ್ಮಿಪುರಂನಲ್ಲಿರುವ ಸರಸ್ವತಿ ಸಮುದಾಯಭವನದಲ್ಲಿಂದು ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು.
ಮೇಯರ್ ಪುಷ್ಪಲತಾ ಜಗನ್ನಾಥ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಅಲ್ಲಿರುವ ಹಿರಿಯರನ್ನು ನೋಡಿ ನಿಮ್ಮನ್ನೆಲ್ಲ ನೋಡಿ ನನಗೆ ನನ್ನ ತಂದೆಯ ನೆನಪಾಗುತ್ತಿದೆ. ಅವರು ಶಿಸ್ತಿನ ಮನುಷ್ಯರಾಗಿದ್ದರು. ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕೆಂದು ಹೇಳುತ್ತಿದ್ದರು. ನನ್ನ ವಿದ್ಯಾಭ್ಯಾಸಕ್ಕೆ ತುಂಬಾ ಪ್ರೋತ್ಸಾಹ ನೀಡಿದ್ದರು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕ ಮಂಡಳಿಯ ಹಿರಿಯ ಸದಸ್ಯರಾದ ಬಿ.ಕೆ.ಶಿವಣ್ಣ, ಸಿ.ಆರ್.ತಿಮ್ಮೇಗೌಡ, ಡಾ.ಶ್ರೀಧರ್ ರಾಜೆ ಅರಸ್, ಡಾ.ಭೋಜಪ್ಪ, ಸುಶೀಲ ಮರಿಗೌಡ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಸಪ್ತರ್ಷಿ ಪ್ರಶಸ್ತಿ ಪುರಸ್ಕೃತ ಪ್ರೊ.ಕೆ.ಕೇಶವಮೂರ್ತಿ, ಹಿರಿಯ ನಾಗರಿಕರ ವಿಶ್ವಸ್ಥ ಮಂಡಳಿಯ ಛೇರ್ಮನ್ ಎಸ್.ವಿ.ಗೌಡಪ್ಪ, ಕೃಷ್ಣಪ್ಪ ಗೌಡ, ಡಾ.ಸಿ.ಎಂ.ಮುನಿರಾಮಪ್ಪ, ಡಾ.ಹೆಚ್.ಎಂ.ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)