ಮೈಸೂರು

ಪುಸ್ತಕಗಳು ಜ್ಞಾನಾರ್ಜನೆಗೆ ಅನುಕೂಲ : ಪ್ರೊ.ನೀ.ಗಿರಿಗೌಡ

ಮೈಸೂರಿನ ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ವೆಂಕಟಗಿರಿ ಪ್ರಕಾಶನ ವತಿಯಿಂದ ಕುವೆಂಪು ಜನ್ಮೋತ್ಸವ ಹಾಗೂ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರೊ.ನೀ.ಗಿರಿಗೌಡ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪುಸ್ತಕಗಳು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅನುಕೂಲ. ಬೇಡದ ವಸ್ತುಗಳನ್ನು ಪಡೆದು ಬಿಸಾಡುವುದಕ್ಕಿಂತ ಮಹಾನ್ ವ್ಯಕ್ತಿಗಳ ಪುಸ್ತಕಗಳನ್ನು ಕೊಂಡು ಓದಿದಲ್ಲಿ ನಮಗೆ ಜ್ಞಾನ ಲಭಿಸುವುದಲ್ಲದೇ ಹಲವು ಮಾಹಿತಿಗಳನ್ನು ನಾವು ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಇಂದಿನ ಮಕ್ಕಳಿಗೆ ಕುವೆಂಪು ಅವರ ಕುರಿತು ಏನೂ ತಿಳಿದಿಲ್ಲ. ಅವರ ಜನ್ಮೋತ್ಸವವನ್ನು ಆಚರಿಸಿ ಅವರ ಕುರಿತು ಮಾಹಿತಿ ನೀಡುವುದರಿಂದ ಮತ್ತು ಪುಸ್ತಕಗಳನ್ನು ನೀಡುವುದರಿಂದ ಅವರು ಕುವೆಂಪು ಕುರಿತು ತಿಳಿದುಕೊಳ್ಳಬಹುದು ಎಂದರು. ಮಕ್ಕಳಿಗೆ ಜಾತಿ-ಮತಗಳ ಕುರಿತು ತಿಳಿದಿರಬಾರದು. ನಾವೆಲ್ಲರೂ ಒಂದೇ ಎಂಬ ಭಾವನೆ ಬೆಳೆಸಬೇಕು ಎಂದರು.

ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕುವೆಂಪು ಪುಸ್ತಕವನ್ನು ವಿತರಿಸಲಾಯಿತು. ಈ ಸಂದರ್ಭ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಆರ್.ಕೃಷ್ಣಪ್ಪ, ವಿಶ್ರಾಂತ ಮುಖ್ಯ ಶಿಕ್ಷಕ ಎಂ.ಕೆ.ಬೋರೇಗೌಡ, ಸಮಾಜ ಸೇವಕ ಕೆ.ರಘುರಾಂ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: