ಸುದ್ದಿ ಸಂಕ್ಷಿಪ್ತ

ಪಂಚಕರ್ಮ ತರಬೇತಿ: ಅರ್ಜಿ ಆಹ್ವಾನ

ಮೈಸೂರು,ಡಿ.12-ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ವತಿಯಿಂದ 2018-19ನೇ ಸಾಲಿನಲ್ಲಿ ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆಯಡಿ ಡಿ.17 ರಿಂದ ಮೂರು ತಿಂಗಳ ಅವಧಿಗೆ ಪಂಚಕರ್ಮ ತರಬೇತಿ ಸರ್ಟಿಫಿಕೇಟ್ ಕೋರ್ಸ್ ನಡೆಯಲಿದೆ.

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಪರಿಶಿಷ್ಟ ಜಾತಿಯ 30 ಫಲಾನುಭವಿಗಳು, ಪರಿಶಿಷ್ಟ ಪಂಗಡದ 12 ಫಲಾನುಭವಿಗಳಿಗೆ ತರಬೇತಿಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ತರಬೇತಿ ಅವಧಿಯಲ್ಲಿ ತಿಂಗಳಿಗೆ 7500 ರೂ. ಶಿಷ್ಯವೇತನ ನೀಡಲಾಗುವುದು.

ಆಸಕ್ತರು ಡಾ||ರಾಧಾಕೃಷ್ಣ ರಾಮ್ರಾವ್, ನೋಡಲ್ ಆಫೀಸರ್  ಎಸ್.ಸಿ.ಪಿ/ಟಿ.ಎಸ್.ಪಿ ತರಬೇತಿ ಕಾರ್ಯಕ್ರಮ, ಮೊ.ಸಂ. 9845112305 ಇವರನ್ನು ಸಂಪರ್ಕಿಸಬಹುದು. (ಎಂ.ಎನ್)

Leave a Reply

comments

Related Articles

error: