ಮೈಸೂರು

ಜೂಜಾಡುತ್ತಿದ್ದ  ಐವರ ಬಂಧನ : 22,550 ರೂ. ನಗದು ವಶ

ಮೈಸೂರು,ಡಿ.12:- ಮೈಸೂರು ನಗರ ಸಿ.ಸಿ.ಬಿ. ಮತ್ತು ಉದಯಗಿರಿ ಪೊಲೀಸರು ಮಾಹಿತಿ ಮೇರೆಗೆ ಇಂದು  ಉದಯಗಿರಿ  ಪೊಲೀಸ್ ಠಾಣಾ ವ್ಯಾಪ್ತಿಯ ಉದಯಗಿರಿ ಟೆಂಟ್‍ ರಸ್ತೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದ ಖಾಲಿ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದ  ಐವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಮೈಸೂರಿನ ಮಹದೇವ ಬಿನ್ ಲೇಟ್ ಮಂಚಯ್ಯ, (59), ಕ್ಯಾತಮಾರನಹಳ್ಳಿ, ಅಬ್ಜಲ್ ಬಿನ್ ಲೇಟ್ ಚೋಟಾಸಾಬ್, (56), ಗಾಯಿತ್ರಿಪುರಂ, ಗೋವಿಂದರಾಜು ಬಿನ್ ಸಿದ್ದಪ್ಪ ( 53), ಕ್ಯಾತಮಾರನಹಳ್ಳಿ, ಮಾದಪ್ಪ ಬಿನ್ ಲೇಟ್ ಪುಟ್ಟಮಾದಯ್ಯ, (59), ಕ್ಯಾತಮಾರನಹಳ್ಳಿ, ಶಿವಸ್ವಾಮಿ ಬಿನ್ ಲೇಟ್ ಜಿ.ಜವರಯ್ಯ, (60), ಕ್ಯಾತಮಾರನಹಳ್ಳಿ, ಎಂದು ಗುರುತಿಸಲಾಗಿದೆ. ಇವರನ್ನು ಬಂಧಿಸಿ, ಜೂಜಾಟಕ್ಕೆ ಬಳಕೆಯಾಗಿದ್ದ  22,550 ರೂ. ನಗದು ಹಣವನ್ನು  ವಶಪಡಿಸಿಕೊಂಡಿದ್ದು, ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ದಾಳಿ ಕಾರ್ಯವನ್ನು ಮೈಸೂರು ನಗರದ ಅಪರಾಧ ವಿಭಾಗದ ಡಿ.ಸಿ.ಪಿ ಡಾ. ವಿಕ್ರಂ ವಿ ಅಮಟೆರವರ ಮಾರ್ಗದರ್ಶನದಲ್ಲಿ, ಸಿ.ಸಿ.ಬಿ. ಘಟಕದ  ಪ್ರಭಾರ ಎ.ಸಿ.ಪಿ. ಸಿ.ಗೋಪಾಲ್‍ ನೇತೃತ್ವದಲ್ಲಿ ಸಿ.ಸಿ.ಬಿ.ಯ ಪೊಲೀಸ್ ಇನ್ಸಪೆಕ್ಟರ್  ಕಿರಣ್‍ಕುಮಾರ್.ಸಿ., ಎ.ಎಸ್.ಐ. ಚಂದ್ರೇಗೌಡ, ಅಲೆಕ್ಸಾಂಡರ್ ಮತ್ತು ಸಿಬ್ಬಂದಿಗಳಾದ  ಸಿ.ಚಿಕ್ಕಣ್ಣ,  ಎಂ.ಆರ್.ಗಣೇಶ್, ಲಕ್ಷ್ಮೀಕಾಂತ್, ರಾಮಸ್ವಾಮಿ,  ಶಿವರಾಜು, ಯಾಕುಬ್ ಷರೀಫ್, ಅಸ್ಗರ್‍ಖಾನ್,  ರಾಜೇಂದ್ರ, ನಿರಂಜನ, ಪ್ರಕಾಶ್, ಆನಂದ್, ಅನಿಲ್, ಗೌತಮ್‍ ಅವರು ಮಾಡಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: