ಮೈಸೂರು

ಓಎಲ್ ಎಕ್ಸ್ ಮೂಲಕವೂ ಭೂಗಳ್ಳರಿಂದ ವಂಚನೆ

ಮೈಸೂರು,ಡಿ.13:- ಸಾರ್ವಜನಿಕರನ್ನು ನಿವೇಶನದ ವಿಷಯವಾಗಿ ವಂಚಿಸುತ್ತಿದ್ದ ಭೂಗಳ್ಳರು ಇದೀಗ ಆನ್ ಲೈನ್ ವಹಿವಾಟು ಓಎಲ್ ಎಕ್ಸ್ ಮೂಲಕವೂ ವಂಚನೆಗಿಳಿದಿದ್ದಾರೆ.

ನಗರದ ಹೇಮರಾಜು ಎಂಬವರೇ ಮೋಸಹೋದವರಾಗಿದ್ದಾರೆ. ಕಳೆದ ವರ್ಷ ಸೆ.3ರಂದು ಯೋಗೇಶ್ ಎಂಬಾತ ಓಎಲ್ ಎಕ್ಸ್ ನಲ್ಲಿ ನಿವೇಶನ ಮಾರಾಟಕ್ಕಿದೆ ಎಂದು ಜಾಹೀರಾತು ನೀಡಿದ್ದು, ಇದನ್ನು ನಂಬಿಕೊಂಡ ಹೇಮರಾಜು ಎಂಬವರು ಯೋಗೇಶ್ ಅವರನ್ನು ಸಂಪರ್ಕಿಸಿದ್ದರು. ಈ ಸಂದರ್ಭ ವಿಒಜಯನಗರದ ಬಳಿ ಇರುವ ನಿವೇಶನವೊಂದನ್ನು ತೋರಿಸಿ ಸತೀಶ್ ಎಂಬಾತನನ್ನು ಮಾಲೀಕ ಎಂದು ಪರಿಚಯಿಸಿದ್ದ. ನಿವೇಶನದ ಬೆಲೆ 1.7ಕೋ.ರೂ.ಇದ್ದು 5ಲಕ್ಷರೂ. ಮುಂಗಡ ಹಣ ನೀಡುವಂತೆ ಒತ್ತಾಯಿಸಿದ್ದ. ಇದನ್ನು ನಂಬಿದ ಹೇಮರಾಜು ಹಣ ನೀಡಿದ್ದು, ಬಳಿಕ ವಿಚಾರಿಸಿದಾಗ ನಿವೇಶನ ನಂದಾ ಎಂಬರಿಗೆ ಸೇರಿದ್ದೆಂದು ತಿಳಿದುಬಂದಿದೆ. ಈ ಕುರಿತು ಹೇಮರಾಜು ಅವರು ದೇವರಾಜ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

ಮಧ್ಯವರ್ತಿಗಳನ್ನು ಯಾವುದೇ ಕಾರಣಕ್ಕೂ ನಂಬಬೇಡಿ. ನಿವೇಶನ ಸಂಖ್ಯೆ ತೆಗೆದುಕೊಂಡು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ದಾಖಲಾತಿಗಳನ್ನು ಪರಿಶೀಲಿಸಿ ನಂತರವಷ್ಟೇ ಖರೀದಿ, ವ್ಯವಹಾರಕ್ಕೆ ಮುಂದಾಗಿ ಎಂದು ಪೊಲೀಸರು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: