ಮೈಸೂರು

ನಂಜನಗೂಡು, ಊಟಿ ಮುಖ್ಯ ರಸ್ತೆ ತಡೆದು ರೈತರ ಪ್ರತಿಭಟನೆ : ಬಂಧನ

ಮೈಸೂರು,ಡಿ.13;-  ರಾಜ್ಯ ರೈತ ಸಂಘಟನೆ‌ ಒಕ್ಕೂಟ ಹಾಗೂ ಕಬ್ಬುಬೆಳೆಗಾರರ ಸಂಘ ಜಂಟಿಯಾಗಿ ರಾಜ್ಯ ಸರಕಾರದ ವಿರುದ್ಧ ಧಿಕ್ಕಾರ ಕೂಗುತ್ತ, ಬೆಳಗಾವಿಯಲ್ಲಿ ನಿರಂತರ ಧರಣಿ ನಡೆಸುತ್ತಿರುವ ರೈತರಿಗೆ ಬೆಂಬಲವಾಗಿ ಮೈಸೂರಿನ ಎಪಿಎಂಸಿ ಹತ್ತಿರದ ನಂಜನಗೂಡು, ಊಟಿ ಮುಖ್ಯ ರಸ್ತೆ ತಡೆದು ಪ್ರತಿಭಟನೆ ನಡೆಸಿದೆ.

ಇಂದು ಪ್ರತಿಭಟನೆ ನಡೆಸಿದ ರೈತರು ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರ ಸರ್ಪಗಾವಲಿನಲ್ಲಿ ಪ್ರತಿಭಟನೆ ನಡೆಯಿತು. ಕೂಡಲೇ ರೈತರ ಸಮಸ್ಯೆಗಳಿಗೆ ಸ್ಪಂದಿಸಿ. ರೈತರಿಗೆ ಯಾಕೆ ಇಲ್ಲದ ಭರವಸೆ ‌ನೀಡುತ್ತೀರಿ. ಆಸೆ ತೋರಿಸಿ ರೈತರಿಗೆ ಮೋಸ  ಮಾಡುತ್ತಿದ್ದೀರಾ? ರೈತರು ಅನ್ನ ನೀರು ಬಿಟ್ಟು ಧರಣಿ ಮಾಡುತ್ತಿದ್ದರೂ ಕ್ಯಾರೆ ಅನ್ನುತ್ತಿಲ್ಲ ಸರ್ಕಾರ. ಬೆಳಗಾವಿಯಲ್ಲಿ 6 ದಿನಗಳಿಂದ ರೈತರು ಪ್ರತಿಭಟನೆ ಮಾಡಿದರೂ ನೀವು ಸುಮ್ಮನೆ ಇದ್ದೀರಾ? ಯಾಕೆ‌ ರೈತರ ಕೂಗು ನಿಮಗೆ ಕೇಳಿಸುತ್ತಿಲ್ಲವಾ? ರೈತರು ಅಂದರೆ ನಿಮಗೆ ಅಷ್ಟು ಕೇವಲವೇ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರೈತರಿಂದ ನಂಜನಗೂಡು ಊಟಿ ಮುಖ್ಯ ರಸ್ತೆ ತಡೆ ನಡೆಸಿ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ  ಫುಲ್ ಬಂದ್ ಆಗಿದ್ದು, ಸುಮಾರು ಅರ್ಧ ಕಿಲೋ ಮೀಟರ್ ಉದ್ದಕ್ಕೂ ವಾಹನಗಳು ನಿಂತಿದ್ದವು. ರಸ್ತೆ ತಡೆಯಿಂದ ಪ್ರಯಾಣಿಕರು ಕಂಗಾಲಾಗಿದ್ದರು. ಪೊಲೀಸರ ಬಿಗಿ ಭದ್ರತೆಯಲ್ಲಿ ಪ್ರತಿಭಟನೆ ನಡೆದರೂ  ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾ ನಿರತ ರೈತರನ್ನು ಪೊಲೀಸ್ ರು ಬಂಧಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: