
ಪ್ರಮುಖ ಸುದ್ದಿ
ಕುಡುಕರ ಹಾವಳಿಯಿಂದ ಬೇಸತ್ತ ಮಹಿಳೆಯಿಂದ ವೈನ್ ಶಾಪ್ ಮಾಲೀಕನಿಗೆ ಆವಾಜ್
ರಾಜ್ಯ(ಚಿಕ್ಕಮಗಳೂರು)ಡಿ.13:- ಬೀದಿಯಲ್ಲಿ ಕುಡುಕರ ಹಾವಳಿಗೆ ಬೇಸತ್ತ ಮಹಿಳೆಯೋರ್ವರು ಆಕ್ರೋಶಗೊಂಡು ಕೈಯಲ್ಲಿ ಕಲ್ಲು ಹಿಡಿದು ವೈನ್ ಶಾಪ್ ಮುಚ್ಚುವಂತೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ಚಿಕ್ಕಮಗಳೂರು ನಗರದ ಮಾರ್ಕೆಟ್ ರೋಡ್ ಬಳಿ ನಡೆದಿದೆ.
ಮಹಿಳೆಯ ರೌದ್ರಾವತಾರಕ್ಕೆ, ಆವಾಜ್ ಗೆ ಹೆದರಿ ಶಿವ ವೈನ್ ಶಾಪ್ ಮಾಲೀಕ ಶಾಪ್ ಮುಚ್ಚಿದ್ದಾನೆ. ಶಿವ ವೈನ್ ಶಾಪ್ ಮಾಲೀಕನಿಗೆ ಬೆಳ್ಳಂಬೆಳಿಗ್ಗೆ ಮಹಿಳೆ ಆವಾಜ್ ಹಾಕಿದ್ದು, ಆಕ್ರೋಶಗೊಂಡ ಮಹಿಳೆಗೆ ಸ್ಥಳೀಯರು ಸಾಥ್ ನೀಡಿದರು. ನಿತ್ಯವೂ ಕುಡುಕ ಪುಂಡರು ರಸ್ತೆಯಲ್ಲಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಬೇಸತ್ತ ಮಹಿಳೆ ಕಲ್ಲನ್ನು ಹಿಡಿದು ವೈನ್ ಶಾಪ್ ಬಳಿ ಬಂದು ಮುಚ್ಚುವಂತೆ ಆಕ್ರೋಶವ್ಯಕ್ತಪಡಿಸಿದರು.
ಚಿಕ್ಕಮಗಳೂರು ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. (ಕೆ.ಎಸ್,ಎಸ್.ಎಚ್)