ದೇಶಪ್ರಮುಖ ಸುದ್ದಿ

ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕಿದೆ : ಸುದೀಪ್ ರಂಜನ್ ಸೇನ್

ದೇಶ(ನವದೆಹಲಿ)ಡಿ.13:- ಪಾಕಿಸ್ತಾನ ಹೇಗೆ ಇಸ್ಲಾಮಿಕ್ ರಾಷ್ಟ್ರವೆಂದು ಕರೆದುಕೊಳ್ಳುತ್ತಿದ್ದೆಯೋ ಅದೇ ರೀತಿಯಲ್ಲಿ ಭಾರತವನ್ನೂ ಹಿಂದೂ ರಾಷ್ಟ್ರವೆಂದು ಘೋಷಿಸಬೇಕಾಗಿದೆ. ಈ ದೇಶವನ್ನು ಎರಡನೆಯ ಇಸ್ಲಾಮಿಕ್ ರಾಷ್ಟ್ರವೆಂದು ಮಾಡಲು ಯಾರೂ ಯತ್ನಿಸಬಾರದು ಎಂದು ಮೇಘಾಲಯದ ಹೈಕೋರ್ಟ್ ನ್ಯಾಯಾಧೀಶ ಸುದೀಪ್ ರಂಜನ್ ಸೇನ್ ಹೇಳಿದ್ದಾರೆ. ಅಸ್ಸಾಂನ ಎನ್’ಆರ್’ಸಿ ಬಗ್ಗೆ ಮಾತನಾಡುತ್ತಾ ಹೇಳಿದ್ದು, ಭಾರತವನ್ನು ಇಸ್ಲಾಮೀಕರಣಗೊಳಿಸುವುದೂ ಸರಿಯಲ್ಲ ಎಂದು ಹೇಳಿದ್ದಾರೆ.

ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಘಾನಿಸ್ತಾದಿಂದ ಬಂದಿರುವ ಜನರು ಭಾರತದೊಳಗೆ ವಾಸಿಸಲು ಅವಕಾಶ ಕಲ್ಪಿಸುವ ಕಾನೂನು ಜಾರಿಗೆ ತರುವಂತೆ ನ್ಯಾಯಾಧೀಶ ರಂಜನ್ ಸೇನ್, ಪ್ರಧಾನ ಮಂತ್ರಿ, ಗೃಹ ಸಚಿವರು, ಹಾಗೂ ಮತ್ತಿತರ ಶಾಸನ ರಚನಕಾರರ ಬಳಿ ಮನವಿ ಮಾಡಿಕೊಂಡಿದ್ದಾರೆ. ಕೆಲವರು ವಿದೇಶಿಗರಾದರೂ ಇವರಿಗೆ ಇಲ್ಲಿನ ಪೌರತ್ವ ನೀಡಲಾಗುತ್ತದೆ. ಆದರೆ ಮೂಲ ಭಾರತೀಯರಾದರೂ ಅವರನ್ನು ಪೌರತ್ವದಿಂದ ಕೈಬಿಡುವುದು ದುಃಖದ ಸಂಗತಿ. 2016ರ ಮಸೂದೆಯ ತಿದ್ದುಪಡಿಯನ್ವಯ ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಅಪ್ಘಾನಿಸ್ತಾನದ ಕ್ರಿಶ್ಚಿಯನ್ನರು ಆರು ವರ್ಷಗಳ ನಂತರ ಭಾರತೀಯ ಪೌರತ್ವಕ್ಕೆ ಅರ್ಹರಾಗಿದ್ದಾರೆ ಆದರೆ ನ್ಯಾಯಾಲಯದಲ್ಲಿ ಈ ಮಸೂದೆಯನ್ನು ಉಲ್ಲೇಖಿಸಲಾಗಿಲ್ಲ ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: