ಮೈಸೂರು

ಬೈಕ್ ಕಳ್ಳನ ಬಂಧನ

ಮೈಸೂರು,ಡಿ.13;- ಬೈಕ್ ಕಳುವು ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಉದಯಗಿರಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಶಾಂತಿ ನಗರ ನಿವಾಸಿ ಮಹಮ್ಮದ್ ಸಮೀವುಲ್ಲಾ(28)ಎಂದು ಗುರುತಿಸಲಾಗಿದೆ.  ಈತ ಬೈಕ್ ಗಳನ್ನು ಮೈಸೂರಿನ ವಿವಿಪುರಂ ಮತ್ತು ಕೆ.ಆರ್.ನಗರದಲ್ಲಿ ಕಳುವು ಮಾಡಿದ್ದ ಎನ್ನಲಾಗಿದೆ.

ಈತನಿಂದ ಒಂದು ಬಜಾಜ್ ಡಿಸ್ಕವರ್ ಹಾಗೂ ಹೀರೋ ಹೋಂಡಾ ಆ್ಯಕ್ಟೀವಾ ಸ್ಕೂಟರ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈತನ ವಿರುದ್ಧ ಈಗಾಗಲೇ ಉದಯಗಿರಿ,ನರಸಿಂಹರಾಜ, ಮಂಡಿ ಠಾಣೆಗಳಲ್ಲಿ ಐದು ಪ್ರಕರಣಗಳು ದಾಖಲಾಗಿವೆ (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: