ಕರ್ನಾಟಕ

ಅನಿವಾಸಿ ಕನ್ನಡಿಗರನ್ನು ಪ್ರೋತ್ಸಾಹಿಸಲು ರಾಜ್ಯ ಸರಕಾರದಿಂದ ನಿಯಮಾವಳಿ

ಬೆಂಗಳೂರು: ರಾಜ್ಯ ಸರಕಾರ ಅನಿವಾಸಿ ಕನ್ನಡಿಗರನ್ನು ಪ್ರೋತ್ಸಾಹಿಸಿ ಹೂಡಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಯಮಾವಳಿಗಳನ್ನು ಬಿಡುಗಡೆ ಮಾಡಿದರು.

ಬೆಂಗಳೂರು ಹೊರವಲಯದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಏರ್ಪಡಿಸಲಾಗಿರುವ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದಲ್ಲಿ ಈ ನಿಯಮಾವಳಿಗಳನ್ನು ಬಿಡುಗಡೆ ಮಾಡಲಾಗಿದ್ದು, ನಾನ್ ರೆಸಿಡೆಂಟ್ ಕನ್ನಡಿಗೆ ಕಾರ್ಡ್ ನೀಡುವುದು ಹಾಗೂ ಹೆಚ್ಚಿನ ಹೂಡಿಕೆಗೆ ಪ್ರೋತ್ಸಾಹ ನೀಡುವುದು ಸೇರಿ ವಿವಿಧ ಯೋಜನೆಗಳನ್ನೊಳಗೊಂಡಿದೆ.

ರಾಜ್ಯ ಸರಕಾರ ಅನಿವಾಸಿ ಕನ್ನಡಿಗರ ಸಂಪರ್ಕ ಬೆಸೆಯುವುದಕ್ಕೆ ಕ್ರಮ ಕೈಗೊಂಡಿದ್ದು, ಇ-ಡೈರೆಕ್ಟರಿ ಜಾಗತಿಕವಾಗಿ ಕನ್ನಡಿಗರನ್ನು ಬೆಸೆಯಲು ಸಹಕಾರಿಯಾಗಲಿದೆ. ಅನಿವಾಸಿ ಕನ್ನಡಿಗ ಕಾರ್ಡ್ ಪಡೆಯುವವರಿಗೆ ಹೊಟೇಲ್, ಚಿನ್ನಾಭರಣ ಮಳಿಗೆ, ಆಸ್ಪತ್ರೆಗಳಲ್ಲಿ ರಿಯಾಯಿತಿ, ಸರಕಾರಿ ಕಚೇರಿಗಳಲ್ಲಿ ತ್ವರಿತ ಸೇವೆಯೂ ಲಭ್ಯವಿರಲಿದೆ.

Leave a Reply

comments

Related Articles

error: