ಸುದ್ದಿ ಸಂಕ್ಷಿಪ್ತ

ಜೆಎಸ್ಎಸ್ ಎಸ್ ತಾಂತ್ರಿಕ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ

ಮೈಸೂರು,ಡಿ.13 : ಜಿಎಸ್ಎಸ್ಎಸ್ ಮಹಿಳಾ ತಾಂತ್ರಿಕಾ ಕಾಲೇಜಿನ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ವಿಭಾಗದ 3ನೇ ಅಂತಾರಾಷ್ಟ್ರೀಯ ಸಮ್ಮೇಳನ ‘ICEECCOT-2018’ ಅನ್ನು ಡಿ. 14 ಮತ್ತು 15ರಂದು ಏರ್ಪಡಿಸಲಾಗಿದೆ.

ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ನಡೆಯುವ ಸಮ್ಮೇಳನವನ್ನು ಡಿ.14ರ ಬೆಳಗ್ಗೆ 9.30ಕ್ಕೆ ಉದ್ಘಾಟನೆ, ಯುಎಸ್ ಎ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನ ಸಹಾಯಕ ಪ್ರಾಧ್ಯಾಪಕಿ ಡಾ.ಶುಭಲಕ್ಷ್ಮಿ ಕೀರ್, ಸಿಂಗಾಪುರ್ ನ ಸಿಂಗಲ್ ಅಂಡ್ ಇಮೇಜ್ ಪ್ರೋಸೆಸಿಂಗ್ ನ ಗ್ರೂಪ್ ಲೀಡರ್ ಡಾ.ಕೆ.ಎನ್. ಭಾನುಪ್ರಕಾಶ್ ಹಾಗೂ ಇತರರು ಇರಲಿದ್ದಾರೆ.

ಡಿ.15ರ ಬೆಳಗ್ಗೆ 9.30ಕ್ಕೆ ಸಮಾರೋಪ,  ಸಿಂಗಾಪುರ್ ನ ನ್ಯಾಷನಲ್ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ.ಟೀಓ ಯಂಗ್ ಮೆಂಗ್ ಆಶಯ ಭಾಷಣ ಮಾಡುವರು, ಕಾಲೇಜಿನ ಅಧ್ಯಕ್ಷ ಡಾ.ಜಗನ್ನಾಥ್ ಶಣೈ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯದರ್ಶಿ ವನಜ ಬಿ. ಪಂಡಿತ್ ಉಪಸ್ಥಿತರಿರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: