ಮೈಸೂರು

ಡಿ.16 : ‘ನಟನ’ದಲ್ಲಿ‘ಹೂಂ ಅಂದ.. ಉಹೂಂ ಅಂದ..!

ಮೈಸೂರು,ಡಿ.14:- ರಾಮಕೃಷ್ಣನಗರದಲ್ಲಿರುವ ಮಂಡ್ಯ ರಮೇಶ್ ನೇತೃತ್ವದ ನಟನರಂಗಶಾಲೆಯಲ್ಲಿ  ಡಿಸೆಂಬರ್ 16 ರಂದು ಸಂಜೆ 6.30ಕ್ಕೆ ಕಿನ್ನರ ಮೇಳ, ತುಮರಿ ತಂಡದಿಂದ ಬರ್ಟೋಲ್ಟ್ ಬ್ರೆಕ್ಟ್‍ ಅವರ‘‘He who said Yes He who said No’ನಾಟಕಾಧಾರಿತ, ಪ್ರಖ್ಯಾತ ನಾಟಕಕಾರ್ತಿ ವೈದೇಹಿ ಅವರ‘ಹೂಂ ಅಂದ.. ಉಹೂಂ ಅಂದ..!ಎಂಬ ನಾಟಕವು ಕೆ.ಜಿ.ಕೃಷ್ಣಮೂರ್ತಿ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.

ಹಿಂದಿನಿಂದ ನಡೆದುಕೊಂಡ ಸಂಪ್ರದಾಯವನ್ನು ಹಾಗೆಯೇ ಮುಂದುವರಿಸಬೇಕೇ ಅಥವಾ ಅದನ್ನು ಮುರಿದು ಕಟ್ಟಬೇಕೇ ಎಂಬ ಪ್ರಶ್ನೆಯನ್ನು ಈ ನಾಟಕ ನಮ್ಮ ಮುಂದಿಡುತ್ತದೆ. ಮೇಸ್ಟರೊಂದಿಗೆ ಮಕ್ಕಳು ಚಾರಣಕ್ಕೆ ಹೊರಟಿದ್ದಾರೆ.ಅವರೊಟ್ಟಿಗೆ ಒಬ್ಬ ಸಣ್ಣ ಹುಡುಗನೂ ಬಂದಿದ್ದಾನೆ. ಕಾಯಿಲೆ ತಾಯಿಗಾಗಿ ಅವನು ಔಷಧ ತರಬೇಕಾಗಿದೆ. ಗುಡ್ಡ ಹತ್ತುವಾಗ ಅವನಿಗೆ ಆರೋಗ್ಯ ತಪ್ಪುತ್ತದೆ.ಸಂಪ್ರದಾಯದ ಪ್ರಕಾರ ಅಂತಹ ಸಂದರ್ಭದಲ್ಲಿ ಆರೋಗ್ಯ ತಪ್ಪಿದವರನ್ನು ಕಣಿವೆಗೆ ದೂಡಿ ಮುಂದೆ ಹೋಗಬೇಕು. ಈ ನಿಯಮವನ್ನು ಪಾಲಿಸಬೇಕೇ ಅಥವಾ ಹೊಸ ನಿಯಮವನ್ನು ಪಾಲಿಸಬೇಕೇ?ಇದು ಕಥೆಯ ತಿರುಳು. ವೈದೇಹಿಯವರು ಈ ನಾಟಕವನ್ನು ನಮ್ಮ ನೆಲಕ್ಕೆ ಒಗ್ಗಿಸಿಕೊಂಡು ಬೇರೆ ಕಥೆಯನ್ನು ಸೇರಿಸುವುದರ ಮೂಲಕ ಹಿಂದೆ ಬಿದ್ದವರನ್ನು ಜೊತೆಯಾಗಿ ಕರೆದುಕೊಂಡು ಸಾಗಬೇಕು ಅನ್ನುವ ಸಂದೇಶವನ್ನು ತಿಳಿಸುತ್ತಾರೆ. ಪ್ರಯೋಗ ಪ್ರಸ್ತುತಿಯಲ್ಲಿ, ದೃಶ್ಯ ಸಂಯೋಜನೆಯಲ್ಲಿ ಮಕ್ಕಳಿಗೆ ಆಪ್ತವಾಗುವಂತೆ ಈ ಪ್ರಯೋಗವನ್ನು ಸಿದ್ಧಪಡಿಸಲಾಗಿದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: