ದೇಶ

ಮಧ್ಯಪ್ರದೇಶದ ಸಿಎಂ ಆಗಿ ಕಮಲ್ ನಾಥ್ ಸಿಂಗ್: ಡಿ.17ಕ್ಕೆ ಪ್ರಮಾಣವಚನ

ಭೋಪಾಲ್,ಡಿ.14-ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಮಧ್ಯಪ್ರದೇಶದ 18ನೇ ಮುಖ್ಯಮಂತ್ರಿಯಾಗಿ ಡಿ.17 ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಡಿ.17 ರಂದು ಭೋಪಾಲದ ಲಾಲ್ ಪರೇಡ್ ಮೈದಾನದಲ್ಲಿ ಕಮಲ್ ನಾಥ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮಧ್ಯಪ್ರದೇಶ ಮುಖ್ಯಮಂತ್ರ ಹುದ್ದೆಯ ಆಕಾಂಕ್ಷಿಗಳಾಗಿ ಕಮಲ್ ನಾಥ್ ಮತ್ತು ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಅವರ ನಡುವೆ ಸಾಕಷ್ಟು ಪೈಪೋಟಿ ಏರ್ಪಟ್ಟಿತ್ತು. ಆದರೆ ಅನುಭವವನ್ನು ಮಾನದಂಡವನ್ನಾಗಿ ಪರಿಗಣಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕಮಲ್ ನಾಥ್ ಅವರನ್ನೇ ಮುಖ್ಯಮಂತ್ರಿ ಎಂದು ಅಧಿಕೃತವಾಗಿ ಗುರುವಾರ ರಾತ್ರಿ ಘೋಷಿಸಿದ್ದಾರೆ.

ಕಮಲ್ ನಾಥ್ ನೆಹರೂ ಕುಟುಂಬದ ನಿಷ್ಠಾವಂತ ನಾಯಕರು. ಹುದ್ದೆ ತಮಗೆ ಒಲಿದಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ನ.28 ರಂದು ಮಧ್ಯಪ್ರದೇಶದಲ್ಲಿ ನಡೆದ ಚುನಾವಣೆಯ ಫಲಿತಾಂಶ ಡಿ.11 ರಂದು ಹೊರಬಿದ್ದಿತ್ತು. ಒಟ್ಟು 230 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 114 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಪಕ್ಷೇತರರ ಬೆಂಬಲದೊಂದಿಗೆ ಬಹುಮತಗಳಿಸಿ ಸರ್ಕಾರ ರಚಿಸುತ್ತಿದೆ. (ಎಂ.ಎನ್)

Leave a Reply

comments

Related Articles

error: