ಮೈಸೂರು

ಬಸ್ ಢಿಕ್ಕಿ: ಸ್ಕೂಟರ್ ಚಾಲಕಿ ಸಾವು

ರೈಲ್ವೆ ಸ್ಟೇಶನ್ ಬಳಿಯಿಂದ ಯಾದವಗಿರಿ ಕಡೆ ತೆರಳುತ್ತಿದ್ದ ಸ್ಕೂಟರ್ ಚಾಲಕಿಯೋರ್ವಳಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗುದ್ದಿದ ಪರಿಣಾಮ ಸ್ಕೂಟರ್ ಚಾಲಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಸಾಯಂಕಾಲ 5 ಗಂಟೆ ಸುಮಾರಿಗೆ ಮೈಸೂರಿನಲ್ಲಿ ನಡೆದಿದೆ.

ಮೃತಳನ್ನು ಕೃಷ್ಣವಿಲಾಸ ರಸ್ತೆ ನಿವಾಸಿ, ಇನ್ಫೋಸಿಸ್ ಉದ್ಯೋಗಿ ರೋಮಾ ಜೈನ್ (29) ಎಂದು ಗುರುತಿಸಲಾಗಿದೆ. ಈತ ರೈಲ್ವೆ ನಿಲ್ದಾಣ ಕಡೆಯಿಂದ ಯಾದವಗಿರಿ ಕಡೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಎಸಿಪಿ ಮಾದಯ್ಯ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೃತ ದೇಹವನ್ನು ಕೆ.ಆರ್. ಆಸ್ಪತ್ರೆಯ  ಶವಾಗಾರಕ್ಕೆ ಸಾಗಿಸಲಾಗಿದೆ. ವಿ.ವಿ. ಪುರಂ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: