ಮೈಸೂರು

ಕೈಲಿದ್ದ ಮೊಬೈಲ್ ಎಗರಿಸಿದ ಕಳ್ಳರು

ಮೈಸೂರು,ಡಿ.14:- ಮಹಿಳೆಯೋರ್ವರು ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ನಿಂತಿದ್ದ ವೇಳೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಅವರ ಕೈಲಿದ್ದ ಮೊಬೈಲ್ ನ್ನು ಎಗರಿಸಿದ ಘಟನೆ ಚಂದ್ರಕಲಾ ಆಸ್ಪತ್ರೆ ರಸ್ತೆಯಲ್ಲಿ ನಡೆದಿದೆ.

ಈ ಕುರಿತು ಮಹಿಳೆ ಶೀರಿನ್ ಪಿ.ರಾಜನ್ ಜಯಲಕ್ಷ್ಮೀಪುರಂ ಠಾಣೆಗೆ ದೂರು ನೀಡಿದ್ದಾರೆ. ದಿ.21.11.2018 ರಂದು ಚಂದ್ರಕಲಾ ಆಸ್ಪತ್ರೆಯ ರಸ್ತೆಯಲ್ಲಿ ಮಧ್ಯಹ್ನ 1.50ರ ಸುಮಾರಿಗೆ ಮೊಬೈಲ್ ಗೆ ಕರೆ ಬಂದಿದ್ದರಿಂದ  ಫೋನ್ ತೆಗೆದುಕೊಂಡು ನೋಡುವಷ್ಟರಲ್ಲಿ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಬಂದಿದ್ದು, ಬೈಕಿನ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ತನ್ನ ಕೈನಲ್ಲಿದ್ದ  ಒನ್ ಪ್ಲಸ್ 6 ಮೊಬೈಲ್ ಪೋನನ್ನು ಕಿತ್ತುಕೊಂಡು ಹೋಗಿದ್ದಾನೆಂದು ದೂರಿನಲ್ಲಿ ತಿಳಿಸಿದ್ದಾರೆ.

ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: