ಸುದ್ದಿ ಸಂಕ್ಷಿಪ್ತ

ಬೇಳೆ ದಾಸ್ತಾನು ಮುಕ್ತಾಯಗೊಂಡ ನಂತರ ಅಕ್ಕಿ ವಿತರಣೆ

ಮಂಡ್ಯ (ಡಿ.14): ಡಿಸೆಂಬರ್-2018ರ ಮಾಹೆಗೆ ಸಾರ್ವಜನಿಕ ವಿತರಣಾ ಪದ್ಧತಿಯಡಿ ವಿತರಿಸುತ್ತಿರುವ ಬೇಳೆ ದಾಸ್ತಾನು ಸಗಟು ಗೋದಾಮುಗಳಿಗೆ ಪೂರೈಕೆಯಾಗದಿರುವ ಹಿನ್ನೆಲೆಯಲ್ಲಿ ನವೆಂಬರ್-2018ರ ಮಾಹೆಯ ಉಳಿಕೆ ದಾಸ್ತಾನು ಬೇಳೆ ಲಭ್ಯವಿರುವವರೆಗು ನೀಡಲಾಗುವುದು.

ಬೇಳೆ ದಾಸ್ತಾನು ಮುಕ್ತಾಯಗೊಂಡ ನಂತರ ಅಕ್ಕಿಯನ್ನು ಮಾತ್ರ ಎಎವೈ ಪ್ರತಿ ಕಾರ್ಡ್‍ಗೆ 35 ಕೆ.ಜಿ ಅಕ್ಕಿ, ಬಿಪಿಎಲ್ ಪ್ರತಿ ಯೂನಿಟ್‍ಗೆ 7 ಕೆ.ಜಿ ಅಕ್ಕಿ ಹಾಗೂ ಲಭ್ಯವಿರುವ ಕಡೆ ಬೇಳೆ ಪ್ರತಿ ಕಾರ್ಡ್‍ಗೆ 1 ಕೆ.ಜಿ.ಗೆ 38 ರೂ.ಗಳಂತೆ ನೀಡಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: