ಪ್ರಮುಖ ಸುದ್ದಿಮೈಸೂರು

ಜಿಲ್ಲಾ ಬ್ರಾಹ್ಮಣ ಸಮಾವೇಶಕ್ಕೆ ಸಿ.ಎಂ. ಹೆಚ್.ಡಿ.ಕುಮಾರಸ್ವಾಮಿಯವರಿಂದ ಚಾಲನೆ ನಾಳೆ

ಮೈಸೂರು,ಡಿ.14 : ನಗರದಲ್ಲಿ ಆಯೋಜಿಸಿರುವ ಬ್ರಾಹ್ಮಣರ ಬೃಹತ್ ಸಮಾವೇಶವನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಎನ್.ಶ್ರೀಧರಮೂರ್ತಿ ತಿಳಿಸಿದರು.

ಯಾವುದೇ ಮೀಸಲಾತಿ ಇಲ್ಲದೇ ಅತ್ಯಂತ ಹಿಂದುಳಿದಿದ್ದ ನಮ್ಮ ಸಮಾಜಕ್ಕೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಶಂಕರ ಜಯಂತಿಯನ್ನು ಸರ್ಕಾರಮಟ್ಟದಲ್ಲಿ ನಡೆಸಲು ಅನುಮೋದನೆ ನೀಡಿದ ಹೆಚ್.ಡಿ.ಕೆ. ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು, ಡಿ.15,16ರಂದು ನಗರದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಈ ಸಮಾವೇಶ ಜರುಗಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಖ್ಯಾತ ಸಂಗೀತ ನಿರ್ದೇಶಕ ಕೆ.ಕಲ್ಯಾಣ್ ಅಧ್ಯಕ್ಷತೆಯಲ್ಲಿ ಡಿ.15ರ ಸಂಜೆ 5 ಗಂಟೆಗೆ ಬ್ರಾಹ್ಮಣ ಯುವ ಗೋಷ್ಠಿ, ಸಂವಾದ ನಡೆಯಲಿದೆ, ಧಾರ್ಮಿಕ ಚಿಂತಕ ಡಾ.ಶೆಲ್ವಪಿಳೈ ಅಯ್ಯಂಗಾರ್ ಉದ್ಘಾಟಿಸಲಿದ್ದರು, ಮುಖ್ಯ ಅತಿಥಿಗಳಾಗಿ ಎನ್.ಎಂ.ನವೀನ್ ಕುಮಾರ್, ಡಾ.ಅಶೋಕ್ ನರೇಂದ್ರ ಮೊದಲಾದವರು ಭಾಗವಹಿಸಲಿದ್ದಾರೆ.

ಬ್ರಾಹ್ಮಣ ಉದ್ಯಮಿಗಳ ಮಳಿಗೆ ಪ್ರದರ್ಶನವನ್ನು ಎರಡು ದಿನಗಳ ಕಾಲ ಆಯೋಜಿಸಿದ್ದು, 40 ವಿಪ್ರ ಉದ್ಯಮಿಗಳ ಅಂಗಡಿ ಮಳಿಗೆಯ ಪ್ರದರ್ಶನ ಮತ್ತು ಮಾರಾಟ, ಪ್ರತಿಭಾ ಪುರಸ್ಕಾರವನ್ನು ನಡೆಸಲಿದ್ದು. ಡಿ.16ರ ಬೆಳಗ್ಗೆ 7.30ಕ್ಕೆ ಶೋಭಾಯಾತ್ರೆ ನಡೆಯಲಿದೆ ಕಾರ್ಯಕ್ರಮದಲ್ಲಿ ಗಣ್ಯರು, ಜನಪ್ರತಿನಿಧಿಗಳು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಜನರು ವಿಪ್ರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಉಪಾಧ್ಯಕ್ಷ ಅಜಯ್ ಶಾಸ್ತ್ರಿ, ಜಂಟಿ ಕಾರ್ಯದರ್ಶಿ ಜಯಸಿಂಹ ಕಡಕೊಳ ಜಗದೀಶ್, ರಂಗನಾಥ್ ಸುಬ್ಬರಾವ್, ಬಿ.ವಿ.ಪ್ರಶಾಂತ್ ಇನ್ನಿತರರು ಇರಲಿದ್ದಾರೆ ಎಂದು ತಿಳಿಸಿದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: