ಪ್ರಮುಖ ಸುದ್ದಿಮೈಸೂರು

ಡಿ.17ರಂದು ಡಾ.ಪ್ರಸನ್ನ ಹೆಗಡೆಯವರ ಕೃತಿಗಳ ಲೋಕಾರ್ಪಣೆ

'ದುಬಾರಿ-ಬಾನಿನಾದ' ಕೃತಿಗಳ ಲೋಕಾರ್ಪಣೆ

ಮೈಸೂರು. ಡಿ.14: ಜ್ಞಾನವರ್ಧಿನಿ ಶಿಕ್ಷಣ ಸಂಸ್ಥೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ವಿಚಾರ ವೇದಿಕೆ, ಭೂಮಿಗಿರಿ ಪ್ರಕಾಶನ ಸಂಯುಕ್ತಾಶ್ರಯದಲ್ಲಿ ಲೇಖಕ ಡಾ.ಪ್ರಸನ್ನ ಹೆಗಡೆಯವರ ಕೃತಿ ಬಿಡುಗಡೆಯನ್ನು ಹಮ್ಮಿಕೊಳ್ಳಲಾಗಿದೆ.

ಡಿ.17 ರ ಬೆಳಗ್ಗೆ 10.30 ಗಂಟೆಗೆ ಕಲಾಮಂದಿರದ ಮನೆಯಂಗಳದಲ್ಲಿ ಸಾಹಿತಿ ಡಾ.ಮಳಲಿ ವಸಂತಕುಮಾರ್ ಅವರು ದುಬಾರಿಯನ್ನ ಹಾಗೂ ಸಂಸ್ಕೃತ ವಿವಿಯ ಕುಲಪತಿ ಡಾ.ಪದ್ಮಶೇಖರ್ ಅವರು ಬಾನಿನಾದ ಕೃತಿಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಹಿರೆಮಳಲಿ ಧರ್ಮರಾಜು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ‌.ರಾಜಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾಜ ಸೇವಕ ರಘುರಾಮಯ್ಯ ವಾಜಪೇಯಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಾ.ದಯಾನಂದ ಕವಿ ಹಿರಿಮರಳಿ ಧರ್ಮರಾಜು. ಭೂಮಿ ಪ್ರಕಾಶನದ ಎನ್.ಬೆಟ್ಟೇಗೌಡ ಹಾಜರಿರಲಿದ್ದಾರೆ ಎಂದು ತಿಳಿಸಿದರು.

ನಂತರ ನಡೆಯುವ ಕವಿಗೋಷ್ಠಿಯಲ್ಲಿ ಸಿ.ಎನ್.ಒ್ರಕಾಶ್, ಎಸ್.ನಾಗೇಶ್ ಗೌಡ, ಹೆಗ್ಗಂದೂರು, ತುಳಸಿ ಇನ್ನಿತರ ಕವಿಗಳು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ್, ಲೇಖಕ ಪ್ರಸನ್ನ ಗೌಡ ಮೊದಲಾದವರು ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: