
ಮೈಸೂರು
26ನೇ ಅಂತರರಾಷ್ಟ್ರೀಯ ಕರೋಲ್ ಗಾಯನ ಸ್ಪರ್ಧೆ
ಮೈಸೂರು,ಡಿ.14:- ಕಾರ್ಮೆಲ್ ಕ್ಯಾಥೋಲಿಕ್ ಅಸೋಸಿಯೇಷನ್ ವತಿಯಿಂದ ಇತ್ತೀಚೆಗೆ 26ನೇ ಅಂತರರಾಷ್ಟ್ರೀಯ ಕರೋಲ್ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಮೈಸೂರು ಸುತ್ತಮುತ್ತಲಿನ ಹಲವು ಶಾಲೆಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸ್ಪರ್ಧೆಯನ್ನು ವಿವಿಧ ವಯೋಮಾನದ 12ವಿಭಾಗಗಳಲ್ಲಿ ಆಯೋಜಿಸಲಾಗಿತ್ತು. ಎನ್ ಪಿಎಸ್ ಇಂಟರ್ ನ್ಯಾಷನಲ್ ಸ್ಕೂಲ್ ನ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಾಥಮಿಕ ವಿಭಾಗದ ಚಿಣ್ಣರು ಮೆಲ್ಲಿಪ್ಲೌಸಸ್ ಹಾಡಿಗಾಗಿ ಪ್ರಥಮಸ್ಥಾನ ಪಡೆದಿದ್ದು, ಪೂರ್ವ ಪ್ರಾಥಮಿಕ ವಿಭಾಗದ ಚಿಣ್ಣರು ದ್ವಿತೀಯ ಸ್ಥಾನಪಡೆದರು. ಎರಡೂ ಗುಂಪುಗಳು ವೇದಿಕೆಯ ಮೇಲೆ ಕರೋಲ್ ಗಾಯನವನ್ನು ತಾಳಬದ್ಧವಾಗಿ ಹಾಡಿ ಗಮನ ಸೆಳೆದಿವೆ. ಇದು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತಂದು ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಉತ್ತಮ ವೇದಿಕೆಯಾಗಿತ್ತು. ವಿದ್ಯಾರ್ಥಿಗಳನ್ನು ಪ್ರೇಕ್ಷಕರು ಪ್ರೋತ್ಸಾಹಿಸಿದರು. ವಿದ್ಯಾರ್ಥಿಗಳೂ ಕೂಡ ತಮ್ಮ ಸುಮಧುರ ಕಂಠಗಳಿಂದ ಹಾಡುವ ಮೂಲಕ ಎಲ್ಲರ ಹೃದಯ ಗೆದ್ದರು. (ಎಸ್.ಎಚ್)