ಕ್ರೀಡೆ

ಎರಡನೇ ಟೆಸ್ಟ್: ಮೊದಲ ದಿನದಂತ್ಯಕ್ಕೆ ಆಸೀಸ್ 277/6

ಪರ್ತ್,ಡಿ.14-ಪರ್ತ್ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ನ ಮೊದಲ ದಿನದಂತ್ಯಕ್ಕೆ ಆಸ್ಟ್ರೇಲಿಯಾ 90 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸೀಸ್ ಮಾರ್ಕಸ್ ಹ್ಯಾರಿಸ್ (70), ಆ್ಯರೋನ್ ಫಿಂಚ್ (50), ಟ್ರಾವಿಸ್ ಹೆಡ್ (58) ಹಾಗೂ ಶಾನ್ ಮಾರ್ಶ್ (45) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ 277 ರನ್ ಪೇರಿಸಿತು.

ಆ್ಯರೋನ್ ಫಿಂಚ್ ಹಾಗೂ ಮಾರ್ಕಸ್ ಹ್ಯಾರಿಸ್ಉತ್ತಮ ಆರಂಭ ನೀಡಿದರು. ಊಟದ ವಿರಾಮದ ಹೊತ್ತಿಗೆ ಆಸೀಸ್ ಸ್ಕೋರ್ 66/0. ಭೋಜನ ವಿರಾಮದ ಬೆನ್ನಲ್ಲೇ ತಮ್ಮ ವೃತ್ತಿಜೀವನದ ಎರಡನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಮಾರ್ಕಸ್ ಹ್ಯಾರಿಸ್ ಚೊಚ್ಚಲ ಅರ್ಧಶತಕ ಸಾಧನೆ ಮಾಡಿದರು. ಅಲ್ಲದೆ ಕೆಲವೇ ಹೊತ್ತಿನಲ್ಲಿ ಫಿಂಚ್ ಜತೆ ಶತಕದ ಜತೆಯಾಟವನ್ನು ಪೂರೈಸಿದರು.

ಫಿಂಚ್ ಅರ್ಧಶತಕ ಸಾಧನೆ ಮಾಡಿದ ಬೆನ್ನಲ್ಲೇ ಫಿಂಚ್ರನ್ನು ಎಲ್ಬಿಡಬ್ಲ್ಯು ಬಲೆಗೆ ಸಿಲುಕಿಸುವಲ್ಲಿ ಬುಮ್ರಾ ಯಶಸ್ವಿಯಾದರು. ಆಗಲೇ ಮೊದಲ ವಿಕೆಟ್ಗೆ ಹ್ಯಾರಿಸ್ ಜತೆ 112 ರನ್ಗಳ ಜತೆಯಾಟದಲ್ಲಿ ಭಾಗಿಯಾಗಿದ್ದರು.
ಉಸ್ಮಾನ್ ಖವಾಜಾ (5) ಕ್ರೀಸಿನಲ್ಲಿ ನೆಲೆಯೂರುವ ಪ್ರಯತ್ನ ಮಾಡಿದರೂ ಇದಕ್ಕೆ ಉಮೇಶ್ ಯಾದವ್ ಆಸ್ಪದ ನೀಡಲಿಲ್ಲ. ಪರಿಣಾಮ 130 ರನ್ ಪೇರಿಸುವಷ್ಟರಲ್ಲಿ ಆಸೀಸ್ಗೆ ಎರಡನೇ ವಿಕೆಟ್ ನಷ್ಟವಾಯಿತು.

ಇದಾದ ಬೆನ್ನಲ್ಲೇ ಅನಿರೀಕ್ಷಿತ ಬೌನ್ಸರ್ ಎಸೆದ ಸ್ಪಿನ್ನರ್ ಹನುಮ ವಿಹಾರಿ, ಸೆಟ್ ಬ್ಯಾಟ್ಸ್ಮನ್ ಮಾರ್ಕಸ್ ಹ್ಯಾರಿಸ್ಗೆ ಪೆವಿಲಿಯನ್ ಹಾದಿ ತೋರಿಸಿದರು. 141 ಎಸೆತಗಳನ್ನು ಎದುರಿಸಿದ ಹ್ಯಾರಿಸ್ 10 ಬೌಂಡರಿಗಳಿಂದ 70 ರನ್ ಗಳಿಸಿದರು.

ಟೀ ವಿರಾಮದ ಹೊತ್ತಿಗೆ ಆಸೀಸ್ ಮೂರು ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿತ್ತು. ಬಳಿಕ ಇಶಾಂತ್ ದಾಳಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಅದ್ಭುತ ಕ್ಯಾಚ್ಗೆ ಪೀಟರ್ ಹ್ಯಾಂಡ್ಸ್ಕಾಂಬ್ (7) ಬಲಿಯಾದರು. ಹಂತದಲ್ಲಿ ಜತೆಗೂಡಿದ ಶಾನ್ ಮಾರ್ಶ್ ಹಾಗೂ ಟ್ರಾವಿಸ್ ಹೆಡ್ ಮಹತ್ವದ ಜತೆಯಾಟದಲ್ಲಿ ಭಾಗಿಯಾಗುವ ಮೂಲಕ ತಂಡವನ್ನು ಅಪಾಯದಿಂದ ಪಾರು ಮಾಡಿದರು. ಪೈಕಿ ಮಾರ್ಶ್ ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟಿದರೆ ಹೆಡ್ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು.

ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟಿದ ಮಾರ್ಶ್ಹೆಡ್ ಜೋಡಿಯು ತಂಡದ ಮೊತ್ತವನ್ನು 200 ಗಡಿ ದಾಟಿಸಿದರು. ಇದರೊಂದಿಗೆ ಪಂದ್ಯದಲ್ಲಿ ಮಗದೊಂದು ಹಿಡಿತ ಸಾಧಿಸಲು ನೆರವಾದರು. ನಡುವೆ ಮಾರ್ಶ್ ಕ್ಯಾಚ್ ಅನ್ನು ರಿಷಬ್ ಪಂತ್ ಮಿಸ್ ಮಾಡಿಕೊಂಡಿರುವುದು ಹಿನ್ನಡೆಯಾಗಿ ಪರಿಣಮಿಸಿತು.

ಇನ್ನೊಂದೆಡೆ ಅರ್ಧಶತಕದತ್ತ ಮುನ್ನುಗ್ಗುತ್ತಿದ್ದ ಮಾರ್ಶ್ಗೆ ವಿಹಾರಿ ಬ್ರೇಕ್ ಹಾಕಿದರು. ಆಗಲೇ ಹೆಡ್ ಜತೆಗೆ 84 ರನ್ಗಳ ಜತೆಯಾಟದಲ್ಲಿ ಭಾಗಿಯಾಗಿದ್ದರು. 98 ಎಸೆತಗಳನ್ನು ಎದುರಿಸಿದ ಮಾರ್ಶ್ ಆರು ಬೌಂಡರಿಗಳಿಂದ 45 ರನ್ ಗಳಿಸಿದರು. ಅತ್ತ ಆಕ್ರಮಣಕಾರಿ ಇನ್ನಿಂಗ್ಸ್ ಕಟ್ಟಿದ ಹೆಡ್ ಸಹ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ಭಾರತಕ್ಕೆ ತಲೆನೋವಾದರು. ಆದರೆ ಎರಡನೇ ಹೊಸ ಚೆಂಡು ಪಡೆದ ಬೆನ್ನಲ್ಲೇ ಅಪಾಯಕ ಹೆಡ್ ಅವರನ್ನು ಇಶಾಂತ್ ಹೊರದಬ್ಬಿದರು. 80 ಎಸೆತಗಳನ್ನು ಎದುರಿಸಿದ ಹೆಡ್ ಆರು ಬೌಂಡರಿಗಳಿಂದ 58 ರನ್ ಗಳಿಸಿದರು.

ಇದೀಗ ಕ್ರೀಸಿನಲ್ಲಿರುವ ನಾಯಕ ಟಿಮ್ ಪೈನ್ (16*) ಹಾಗೂ ಪ್ಯಾಟ್ ಕಮಿನ್ಸ್ (11*) ತಂಡಕ್ಕೆ ಹೆಚ್ಚಿನ ಆಘಾತವಾಗದಂತೆ ನೋಡಿಕೊಂಡರಲ್ಲದೆ ದ್ವಿತೀಯ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಭಾರತದ ಪರ ಇಶಾಂತ್ ಶರ್ಮಾ ಹಾಗೂ ಹನುಮ ವಿಹಾರಿ ತಲಾ ಎರಡು ಮತ್ತು ಜಸ್ಪ್ರೀತ್ ಬುಮ್ರಾ ಹಾಗೂ ಉಮೇಶ್ ಯಾದವ್ ತಲಾ ಒಂದು ವಿಕೆಟನ್ನು ಹಂಚಿಕೊಂಡರು. (ಎಂ.ಎನ್)

Leave a Reply

comments

Related Articles

error: