ಕರ್ನಾಟಕದೇಶಮನರಂಜನೆ

ಕೆಜಿಎಫ್ ಬಿಡುಗಡೆಗೆ ಥಿಯೇಟರ್ ಪಟ್ಟಿ ಘೋಷಣೆ: ಭಾನುವಾರದಿಂದಲೇ ಖರಿದಿಸಬಹುದು ಟಿಕೆಟ್ !

ಬೆಂಗಳೂರು (ಡಿ.14): ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಕೆಜಿಎಫ್ ಚಿತ್ರ ಮುಂದಿನ ವಾರ ರಿಲೀಸ್ ಅಗುತ್ತಿದ್ದು, ಇಂದು ಅಧಿಕೃತವಾಗಿ ಚಿತ್ರಮಂದಿರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಬೆಂಗಳೂರಿನ ನರ್ತಕಿ ಮೇನ್ ಥಿಯೇಟರ್ ಜೊತೆಗೆ ಕರ್ನಾಟಕದಲ್ಲಿ 250 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕೆಜಿಎಫ್ ಅಬ್ಬರಿಸಲಿದೆ. ಬಿಡುಗಡೆಗೂ ಮುನ್ನ ಇನ್ನೂ 100ರಿಂದ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ. ಸದ್ಯಕ್ಕೆ ಕನ್ನಡ ಹಾಗೂ ತಮಿಳು ಸಿನಿಮಾಗಳ ಥಿಯೇಟರ್ ಲೀಸ್ಟ್ ಫೈನಲ್ ಆಗಿದ್ದು, ತಮಿಳಿನಲ್ಲಿ 100 ಸ್ಕ್ರೀನ್‍ಗಳಲ್ಲಿ ಸಿನಿಮಾ ತೆರೆ ಕಾಣುತ್ತಿದೆ.

ಇದೇ ಭಾನುವಾರದಿಂದ ಬುಕ್ ಮೈ ಶೋ ಹಾಗೂ ಥಿಯೇಟರ್ ಗಳಲ್ಲಿ ಟಿಕೆಟ್ ಮುಂಗಾಡವಾಗಿ ದೊರೆಯಲಿದೆ. ಮುಂಗಡ ಬುಕ್ಕಿಂಗ್ ನೋಡಿಕೊಂಡು ಥಿಯೇಟರ್’ಗಳಲ್ಲಿ ಸಂಖ್ಯೆ ಹೆಚ್ಚು ಮಾಡೋ ಬಗ್ಗೆ ಸಿನಿಮಾ ಟೀಮ್ ನಿರ್ಧಾರ ಮಾಡಲಿದೆ ಎಂದು ತಿಳಿದುಬಂದಿದೆ. (ಎನ್.ಬಿ)

Leave a Reply

comments

Related Articles

error: