ಮೈಸೂರು

ಜಾಂಬೂರಿ ಉತ್ಸವ ; ವಿದ್ಯಾರ್ಥಿನಿಗೆ ಲಘು ಹೃದಯಾಘಾತ : ತಡವಾಗಿ ಬೆಳಕಿಗೆ ಬಂದ ಘಟನೆ

ಮೈಸೂರಿನ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆದ ಜಾಂಬೂರಿ ಸಮಾವೇಶದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿನಿಗೆ  ಲಘು ಹೃದಯಾಘಾತ ಸಂಭವಿಸಿ ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹಿಮಾಚಲ ಪ್ರದೇಶ ಮೂಲದ ಪಿ.ಯು.ಸಿ ವಿದ್ಯಾರ್ಥಿನಿ ಶಬ್ನಮ್ ಠಾಕೂರ್ ಎಂಬವಳಿಗೆ ಲಘು ಹೃದಯಾಘಾತ ಸಂಭವಿಸಿ ವಾರ ಕಳೆದರೂ ಆಸ್ಪತ್ರೆ ಬಳಿ ತಿರುಗಿಯೂ ನೋಡದೆ ಜಾಂಬೂರಿ ಆಯೋಜಕರು ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಜನವರಿ 2ರಂದೇ ಆಸ್ಪತ್ರೆಗೆ ದಾಖಲಾಗಿದ್ದರೂ ಮಾನವೀಯತೆಗೂ ಕೂಡ ಜಾಂಬೂರಿಯ ಆಯೋಜಕರಾಗಲಿ ಅಧಿಕಾರಿಗಳಾಗಲಿ ಅತ್ತ ಸುಳಿದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇನ್ನೂ ಪ್ರಮುಖವಾಗಿ ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಏಕತೆ, ಸಮಾನತೆ ಕಲಿಸುವ ನಿಟ್ಟಿನಲ್ಲಿ ಜಾಂಬೂರಿ ಆಯೋಜಿಸಲಾಗಿತ್ತು. ಆದರೆ, ಮಕ್ಕಳ ಆರೋಗ್ಯದ ಕುರಿತು ಅಧಿಕಾರಿಗಳೇ ನಿರ್ಲಕ್ಷ್ಯ ವಹಿಸಿದ್ದು ಎಷ್ಟು ಸರಿ ಎಂಬ ಪ್ರಶ್ನೆಯೂ ಕೇಳಿ ಬರುತ್ತಿದೆ.

ಶಸ್ತ್ರ ಚಿಕಿತ್ಸೆಯ ನಂತರ ಇದೀಗ ವಿದ್ಯಾರ್ಥಿನಿ ಚೇತರಿಸಿಕೊಂಡಿದ್ದಾಳೆ. ವಿಪರ್ಯಾಸ ಎಂದರೆ ಸ್ಕೌಟ್ಸ್ ಅಂಡ್ ಗೈಡ್ಸ್ ನ ರಾಜ್ಯ ಆಯುಕ್ತರು ಮೈಸೂರಿನಲ್ಲಿದ್ದರೂ ಕೂಡ ವಿದ್ಯಾರ್ಥಿನಿಗೆ ಸಾಂತ್ವನ ಹೇಳದೆ ಅಮಾನವೀಯತೆ ಪ್ರದರ್ಶನ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಹಿಮಾಚಲ ಪ್ರದೇಶದಿಂದ ತಂದೆ-ತಾಯಿಗಳು ಆಗಮಿಸಿದ್ದು, ಶಬ್ನಮ್’ಳನ್ನು ನೋಡಿಕೊಳ್ಳುತ್ತಿದ್ದಾರೆ. ಆದರೆ ಜಿಲ್ಲಾಧಿಕಾರಿ ಡಿ.ರಂದೀಪ್ ಅವರಲ್ಲಿ ‘ಸಿಟಿಟುಡೆ’ಯ ಪ್ರತಿನಿಧಿ ಪ್ರತಿಕ್ರಿಯೆ ಕೇಳಿದಾಗ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಹಿಮಾಚಲ ಮೂಲದ ವಿದ್ಯಾರ್ಥಿನಿಗೆ ಜಿಲ್ಲಾಡಳಿತ ಸಹಾಯ ಹಸ್ತ ನೀಡಿದೆ. ಅಧಿಕಾರಿಗಳು ಈಗಾಗಲೇ ಭೇಟಿ ನೀಡಿ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ ಎನ್ನಲಾಗಿದ್ದು ಆರೋಪವನ್ನು ತಳ್ಳಿಹಾಕಿದ್ದಾರೆ. ಆಕೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವವರೆಗೂ ಸಹಕರಿಸುವುದಾಗಿ ತಿಳಿಸಿದ್ದಾರೆ.

Leave a Reply

comments

Related Articles

error: