ಸುದ್ದಿ ಸಂಕ್ಷಿಪ್ತ

ಡಿ.15ಕ್ಕೆ ಜೆಎಸ್ಎಸ್ ವಾಕ್ ಶ್ರವಣ ಸಂಸ್ಥೆಯಲ್ಲಿ ಮುಕ್ತದಿನಾಚರಣೆ

ಮೈಸೂರು,ಡಿ.14-ಜೆಎಸ್ಎಸ್ ವಾಕ್ ಶ್ರವಣ ಸಂಸ್ಥೆ ಡಿ.15 ರಂದು ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಮುಕ್ತದಿನಾಚರಣೆ (ಓಪನ್ ಹೌಸ್) ಕಾರ್ಯಕ್ರಮವನ್ನು ಆಯೋಜಿಸಿದೆ.

ಸಾರ್ವಜನಿಕರಲ್ಲಿ ವಾಕ್-ಶ್ರವಣ ವಿಜ್ಞಾನ ಹಾಗೂ ತತ್ಸಂಭಂದಿಸಿದ ನ್ಯೂನತೆ, ವಿಕಲಾಂಗತೆಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾತು, ಭಾಷೆ ಹಾಗೂ ಶ್ರವಣ ಪ್ರಕ್ರಿಯೆಗಳ ಕುರಿತ ಮಾದರಿಗಳ, ಚಾರ್ಟ್ ಗಳ ಮತ್ತು ಶ್ರವಣ ಸಾಧನಗಳ ವಸ್ತು ಪ್ರದರ್ಶನ ಇರಲಿದೆ. ತನ್ಮೂಲಕ ವಾಕ್-ಶ್ರವಣ ಸಂಬಂಧಿತ ಪ್ರಗತಿ, ನ್ಯೂನತೆಗಳ ಹಾಗೂ ಚಿಕಿತ್ಸಾ ವಿಧಾನಗಳ ಮಾಹಿತಿ ದೊರಕಲಿದೆ.

ಶಾಲಾ ವಿದ್ಯಾರ್ಥಿಗಳಿಗಾಗಿ ಸಂವಹನೆಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರಸಪ್ರಶ್ನೆ ಮತ್ತು ಸಂವಾದಾತ್ಮಕ ಆಟಗಳನ್ನು ಏರ್ಪಡಿಸಲಾಗಿದೆ. ಇದೇ ಸಂದರ್ಭದಲ್ಲಿ ಉಚಿತ ವಾಕ್ ಶ್ರವಣ ಹಾಗೂ ಭಾಷಾ ತಪಾಸಣೆಯು ಲಭ್ಯವಿದೆ. (ಎಂ.ಎನ್)

 

Leave a Reply

comments

Related Articles

error: