
ಮೈಸೂರು
ಡಿ.30ರಂದು ಕೆಸೆಟ್ ಅರ್ಹತಾ ಪರೀಕ್ಷೆ
ಮೈಸೂರು,ಡಿ.14 : ಮೈಸೂರು ವಿಶ್ವವಿದ್ಯಾಲಯದ ಕರ್ನಾಟಕ ರಾಜ್ಯ ಉಪನ್ಯಾಸಕ ಅರ್ಹತಾ ಪರಿಕ್ಷೆ (ಕೆಸೆಟ್) ಅನ್ನು ಡಿ.30ರಂದು ನಡೆಯಲಿದೆ.
ಈ ಹಿಂದೆ ಡಿ.16ರಂದು ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು, ಸದರಿ ದಿನಾಂಕವನ್ನು ಅಭ್ಯರ್ಥಿಗಳ ಹಿತದೃಷ್ಟಿಯಿಂದ ಡಿ.30ಕ್ಕೆ ಮುಂದೂಡಲಾಗಿದೆ.
ಅಂದು ಬೆಳಗ್ಗೆ 9.30 ರಿಂದ 10.30ರವರೆಗೆ ಹಾಗೂ ಎರಡನೇ ಅವಧಿಗೆ ಬೆಳಗ್ಗೆ 11 ರಿಂದ 1ರವರೆಗೆ ವಿವಿಯ 11 ನೋಡಲ್ ಕೇಂದ್ರಗಳಲ್ಲಿ ನಡೆಸಲಾಗುವುದು.
ಡಿ.20ರ ನಂತರ ಕೆಸೆಟ್ ಅಂತರ್ಜಾಲದಲ್ಲಿ ಸೀಟ್ ಹಂಚಿಕೆಯನ್ನು ಪ್ರಕಟಿಸಲಾಗುವುದು ಎಂದು ಕೆಸೆಟ್ ಪ್ರಾಧಿಕಾರ ಸಂಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)