ಸುದ್ದಿ ಸಂಕ್ಷಿಪ್ತ

ಎನ್.ಎಸ್.ಎಸ್ ತರಬೇತಿ ಕಾರ್ಯಾಗಾರ ನಾಳೆ

ಮೈಸೂರು,ಡಿ.14 : ಮೈವಿವಿಯ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ಉದ್ಘಾಟನಾ ಸಮಾರಂಭವನ್ನು ನಾಳೆ (15)ರ ಬೆಳಗ್ಗೆ 10 ಗಂಟೆಗೆ ಎನ್.ಎಸ್.ಎಸ್.ಭವನ, ಸಾಹುಕಾರ್ ಚನ್ನಯ್ಯ ರಸ್ತೆ, ಸರಸ್ವತಿಪುರಂನ ಏರ್ಪಡಿಸಲಾಗಿದೆ.

ಮೈವಿವಿಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಉದ್ಘಾಟಿಸಲಿದ್ದಾರೆ. ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು, ಉಪಾಧ್ಯಕ್ಷ ಪ್ರೊ.ಜಿ.ಬಿ.ಶಿವರಾಜು, ಸಿಂಡಿಕೇಟ್ ಮಾಜಿ ಸದಸ್ಯ ಪ್ರೊ.ಸತ್ಯನಾರಾಯಣ, ಪ್ರಾಧ್ಯಾಪಕ ಪ್ರೊ.ಬಿ.ಕೆ.ಜಗದೀಶ್, ಮೈವಿವಿಯ ವಿಶ್ರಾಂತ ರಾ.ಸೇ.ಯೊ ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರೊ.ಕೆ.ಕಾಳಚನ್ನೇಗೌಡ ಹಾಜರಿರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: