ಮೈಸೂರು

ವಿಕಲಚೇತನ ಮಕ್ಕಳ ಸೌಲಭ್ಯಕ್ಕೆ ಹೊಸ ಯೋಜನೆ ರೂಪಿಸಬೇಕಿದೆ : ಪದ್ಮಾ

ವಿಕಲಚೇತನ ಮಕ್ಕಳ ಸೌಲಭ್ಯಗಳ ಕುರಿತು ಹೊಸ ಯೋಜನೆ ರೂಪಿಸಬೇಕಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಪದ್ಮಾ ತಿಳಿಸಿದರು.

ಮೈಸೂರಿನ ತಿಲಕ್ ನಗರದಲ್ಲಿರುವ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದ ಐದನೆಯ ವಾರ್ಷಿಕೋತ್ಸವ ಸಮಾರಂಭವನ್ನು ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿ, ವಿಕಲಚೇತನ ಮಕ್ಕಳು ಇಲ್ಲಿರುವಷ್ಟು ದಿನ ಯಾವುದೇ ಸಮಸ್ಯೆಗಳು ಗೋಚರಿಸುವುದಿಲ್ಲ. ಆದರೆ ಇಲ್ಲಿಂದ ತೆರಳಿದಾಗ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಅವರಿಗೆ ಹೊಸ ಸೌಲಭ್ಯಗಳ ಯೋಜನೆಯನ್ನು ರೂಪಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಕೆಲವು ವಿಕಲಚೇತನ ಫಲಾನುಭವಿಗಳಿಗೆ ಗಾಲಿ ಕುರ್ಚಿಗಳನ್ನು ವಿತರಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಎಚ್.ಆರ್. ಶ್ರೀನಿವಾಸ್, ಇನ್ನರ್‍’ವ್ಹೀಲ್ ಮೈಸೂರು ಸೆಂಟ್ರಲ್ ಅಧ್ಯಕ್ಷೆ ಚಂದ್ರಿಕಾ ಸುಧೀರ್, ಭಾರತೀಯ ರೆಡ್‍ಕ್ರಾಸ್ ಸೊಸೈಟಿ ಮೈಸೂರು ಶಾಖೆ ಸಭಾಪತಿ ಡಾ.ಕೆ.ಬಿ.ಗುರುಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: