ಕರ್ನಾಟಕಪ್ರಮುಖ ಸುದ್ದಿ

ಡಿ. 22-23 ರಂದು ಮೆಟ್ರೋ ಸಂಚಾರ ಸ್ಥಗಿತ: ಬಿಎಂಆರ್‍ಸಿಎಲ್

ಬೆಂಗಳೂರು (ಡಿ.14): ಬೈಯಪ್ಪನಹಳ್ಳಿ-ನಾಯಂಡಹಳ್ಳಿ ಮಾರ್ಗದ ಟ್ರಿನಿಟಿ ನಿಲ್ದಾಣದ ಬಳಿ ಪಿಲ್ಲರ್ ನಲ್ಲಿ ಬಿರುಕು ಬಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಎಂಆರ್ಸಿ ಎಂಡಿ ಆಜಯ್ ಸೇಠ್ ಅವರು ಇಂದು ತುರ್ತು ಸುದ್ದಿಗೋಷ್ಠಿಯನ್ನು ನಡೆಸಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಇದೇ ವೇಳೆ ಅವರು ಬೆಂಗಳೂರಿನ ಎಂ ಜಿ ರಸ್ತೆ ಬೈಯಪ್ಪನಹಳ್ಳಿ ಡಿಸೆಂಬರ್ 22-23 ಮೆಟ್ರೋ ಸಂಚಾರ ಸ್ಥಗಿತವಾಗಲಿದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಇದೇ ವೇಳೆ ಅವರು ಘಟನೆಗೆ ಸಂಬಂಧಪಟ್ಟಂತೆ ದೆಹಲಿ ಟೀಮ್ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ, ಡೀಟೇಲ್ ಪ್ರಾಜೆಕ್ಟ್ ರಿಪೋರ್ಟ್ ಸಿದ್ಧ ಮಾಡಿಕೊಡುವ ಬಗ್ಗೆ ಕೂಡ ದೆಹಲಿ ಟೀಮ್ ನಿಂದ ಸಲಹೆ ಪಡೆಯಲಾಗಿದ್ದು, ಮುಂದಿನ ದಿವಸದಿಂದ ಕೂಡ ನಮ್ಮ ತಂಡ ದೆಹಲಿ ತಂಡದೊಂದಿಗೆ ಸಂಪರ್ಕದಲ್ಲಿ ಇರುತ್ತದೆ ಅಂತ ಹೇಳಿದರು. ಇನ್ನು ಸದ್ಯ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಕ್ರಮಕೈಗೊಂಡು ಮೆಟ್ರೋ ರೇಲ್ ಅನ್ನು ರನ್ ಮಾಡಲಾಗುತ್ತಿದೆ ಎಂದು ಸೇಠ್ ತಿಳಿಸಿದ್ದಾರೆ.(ಎನ್.ಬಿ)

Leave a Reply

comments

Related Articles

error: