ದೇಶಪ್ರಮುಖ ಸುದ್ದಿ

ರೈತರ ಸಾಲಮನ್ನಾಗಾಗಿ ರಾಜ್ಯದಿಂದ ಮಾಹಿತಿ ಕೇಳಿದ ಕೇಂದ್ರ ಸರ್ಕಾರ!

ಬೆಂಗಳೂರು (ಡಿ.14): ಪಂಚರಾಜ್ಯಗಳ ಚುನಾವಣೆ ಬಳಿಕ ಎಚ್ಚೆತ್ತುಕೊಂಡಿರುವ ಕೇಂದ್ರ ಸರಕಾರ ದೇಶದ ರೈತರ ಸಾಲಮನ್ನಾ ಮಾಡುವುದರ ಬಗ್ಗೆ ಗಮನ ಹರಿಸಿದ್ದು, ಈ ಮೂಲಕ ಮುಂಬರು ಲೋಕಸಭಾ ಚುನಾವಣೆಯಲ್ಲಿ ದೇಶದ ರೈತ ಸಮುದಾಯವನ್ನು ತನ್ನತ್ತ ಸೆಳೆಯುವುದಕ್ಕೆ ಮುಂದಾಗಿದೆ ಎನ್ನಲಾಗಿದೆ.

ಈ ನಡುವೆ ರೈತರ ಸಾಲಮನ್ನಾ ಮಾಡುವ ವಿಷಯಕ್ಕೆ ಸಂಬಂಧಪಟ್ಟಂತೆ ಈಗಾಗಲೇ ನಮ್ಮ ರಾಜ್ಯದಲ್ಲಿ ಚಾಲನೆ ಸಿಕ್ಕಿರುವ ರೈತರ ಸಾಲಮನ್ನಾಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ತೆಗೆದುಕೊಂಡಿದೆ ಎನ್ನಲಾಗಿದೆ. ಕೇಂದ್ರದ ಆರ್ಥಿಕ ಇಲಾಖೆ ಅಧಿಕಾರಿಗಳು ರಾಜ್ಯ ಸರಕಾರ ಮನ್ನಾ ಮಾಡಿರುವ ರೂಪುರೇಷೆಗಳಿಗೆ ಸಂಬಂಧಪಟ್ಟಂತೆ ನಿನ್ನ ರಾಜ್ಯ ಸರಕಾರದಿಂದ ಮಾಹಿತಿಯನ್ನು ಪಡೆದುಕೊಂಡಿದೆ ಅಂತ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. (ಎನ್.ಬಿ)

Leave a Reply

comments

Related Articles

error: